ನವದೆಹಲಿ: 2024-25ರ ಹಣಕಾಸು ವರ್ಷದ ಮೊದಲ 8 ತಿಂಗಳಲ್ಲಿ ದೇಶದಲ್ಲಿ 11.70 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.
ಸದನದಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಅವರು, ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ಹೇಳಿದ್ದಾರೆ.
'ಶಿಕ್ಷಣ ಸಚಿವಾಲಯದ ಪ್ರಬಂಧ್ ಪೋರ್ಟಲ್ ಶಿಕ್ಷಣದ ಸಂಪೂರ್ಣ ಅಂಕಿಅಂಶಗಳನ್ನು ನಿರ್ವಹಿಸುತ್ತದೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಸಂಬಂಧಿಸಿದ ದತ್ತಾಂಶವನ್ನು ಒದಗಿಸಲಾಗುತ್ತದೆ'ಎಂದು ಚೌಧರಿ ಹೇಳಿದ್ದಾರೆ.
ಸಚಿವರು ಹಂಚಿಕೊಂಡ ಅಂಕಿ ಅಂಶಗಳ ಪ್ರಕಾರ, ಒಟ್ಟು 11,70,404 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದಲ್ಲಿ (7.84 ಲಕ್ಷ) ಗರಿಷ್ಠ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಜಾರ್ಖಂಡ್ (65,000 ಕ್ಕಿಂತ ಹೆಚ್ಚು) ಮತ್ತು ಅಸ್ಸಾಂ (63,000 ಕ್ಕಿಂತ ಹೆಚ್ಚು) ನಂತರದ ಸ್ಥಾನದಲ್ಲಿದ್ದಾರೆ.