ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 80 ರ ಸಂಭ್ರಮ ಕಾರ್ಯಕ್ರಮ, ಕೀರಿಕ್ಕಾಡು ಪುರಸ್ಕಾರ ಪ್ರದಾನ ಹಾಗೂ ಆರೋಗ್ಯ ತರಬೇತಿ ಶಿಬಿರ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಭಾನುವಾರ ನಡೆಯಿತು. ಕೀರಿಕ್ಕಾಡು ಪುರಸ್ಕಾರವನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರಿಗೆ ನೀಡಿ ಗೌರವಿಸಲಾಯಿತು. ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ವಹಿಸಿದ್ದರು. ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಡಿ.ರಾಮಣ್ಣ ಮಾಸ್ತರ್ ಅಭಿನಂದನಾ ಭಾಷಣ ಮಾಡಿದರು. ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ರಮಾನಂದ ಬನಾರಿ, ಕಾರ್ಯದರ್ಶಿ ವಿಶ್ವವಿನೋದ ಬನಾರಿ, ನಂದಕಿಶೋರ ಬನಾರಿ ಮತ್ತಿತರರು ಉಪಸ್ಥಿತರಿದ್ದರು.
ನಮಿತ ಬೆಳ್ಳಿಪ್ಪಾಡಿ ಪ್ರಾರ್ಥನೆ ಹಾಡಿದರು. ಪೂಜಾಶ್ರೀ ದೇಲಂಪಾಡಿ ಸ್ವಾಗತಿಸಿ, ರಮಾನಂದ ರೈ ವಂದಿಸಿದರು. ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿರಿಯ ಯಕ್ಷಗಾನ ಕಲಾವಿದರ ನೇತೃತ್ವದಲ್ಲಿ ಶ್ರೀರಾಮ ದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಿತು.
ಸಮಾರಂಭಕ್ಕಿಂತ ಮುನ್ನ ಆರೋಗ್ಯ ವರ್ಧನೆಗೆ ಸುಲಭ ಸೂತ್ರಗಳು ಉಚಿತ ಆರೋಗ್ಯ ತರಬೇತಿ ಶಿಬಿರ ನಡೆಯಿತು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ತರಬೇತಿ ನೀಡಿದರು. ಸರಳ ವ್ಯಾಯಾಮ, ಯೋಗಾಸನ, ಧ್ಯಾನ, ಪ್ರಾಣಾಯಾಮ ಇತ್ಯಾದಿ ತರಬೇತಿ ಪ್ರಾತಿಕ್ಷಿಕೆ ನಡೆಯಿತು.