ನವದೆಹಲಿ: ನವೆಂಬರ್ 29ರಿಂದ ಇಲ್ಲಿಯವರೆಗೆ ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಸುಮಾರು 82,450 ಅರ್ಜಿ ಮತ್ತು ಮತದಾರರ ನೋಂದಣಿಗೆ 4.8 ಲಕ್ಷ ಅರ್ಜಿಗಳು ಬಂದಿವೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ (ಸಿಇಒ ) ಸೋಮವಾರ ತಿಳಿಸಿದೆ.
ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.
ಮತದಾರರ ಪಟ್ಟಿಗೆ ಸೇರ್ಪಡೆ, ತೆಗೆಯುವುದು ಅಥವಾ ಮಾರ್ಪಾಡುಗಳನ್ನು ಮಾಡಿ, ಜ. 6, 2025ರಂದು ಪ್ರಕಟಿಸಲಾಗುವುದು ಎಂದು ಸಿಇಒ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಓಖ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ನೋಂದಣಿಗಾಗಿ ಸುಳ್ಳು ದಾಖಲೆಗಳನ್ನು ನೀಡಿದ ಆರೋಪದಡಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಇಒ ಕಚೇರಿ ತಿಳಿಸಿದೆ.