ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಡಿ.8 ಭಾನುವಾರ ಅರ್ಧ ಏಕಾಹ ಭಜನೆ ನಡೆಯಲಿರುವುದು. ಅಂದು ಬೆಳಗ್ಗೆ ಸೂರ್ಯೋದಯದಲ್ಲಿ ಧಾರ್ಮಿಕ ಮುಂದಾಳು ಹರೀಶ್ ಭಟ್ ಚೇರ್ಕೂಡ್ಲು ದೀಪೋಜ್ವವನೆಗೈಯುವುದರೊಂದಿಗೆ ವಿವಿಧ ಭಜನಾ ಸಂಘಗಳಿಂದ ಭಜನೆ ಆರಂಭವಾಗಲಿದೆ.
ಸಂಜೆ 7.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗೋಪಾಲಕೃಷ್ಣ ಭಜನಾ ಮಂದಿರದ ಭಜನಾ ಸಮಿತಿ ಅಧ್ಯಕ್ಷ ಶ್ರೀಧರ ಪದ್ಮಾರು ಅಧ್ಯಕ್ಷತೆ ವಹಿಸಲಿರುವರು. ಕಣ್ಣೂರು ಕ್ರೈಬ್ರಾಂಚ್ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಶ್ರೀನಾಥ್ ಪಿ.ಆರ್. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸೇವಾಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ, ಅಗಲ್ಪಾಡಿ ಶಾಲೆಯ ಅಧ್ಯಾಪಕ ಹರಿನಾರಾಯಣ ಮಾಸ್ತರ್ ಗೌರವ ಉಪಸ್ಥಿತರಿರುವರು. ಇದೇ ಸಂದಭರ್Àದಲ್ಲಿ ನಾಡಿನ ಹಿರಿಯ ಭಜಕರಿಗೆ ಗೌರವಾರ್ಪಣೆ ನಡೆಯಲಿದೆ. ಹಿರಿಯರಾದ ವಸಂತಿ ಟೀಚರ್ ಅಗಲ್ಪಾಡಿ, ಬಾಬು ಮಾಸ್ತರ್ ಅಗಲ್ಪಾಡಿ, ಸುಧಾಮ ಪದ್ಮಾರು, ರೂಪರಾಜ್ ಪದ್ಮಾರು, ಲಾವಣ್ಯ ಗಿರೀಶ್, ದೀಪಕ್ ಬೆದ್ರುಕೂಡ್ಲು, ರಮೇಶ್ ಕೃಷ್ಣ ಪದ್ಮಾರು, ರಾಜೇಶ್ ಮಾಸ್ತರ್ ಅಗಲ್ಪಾಡಿ ಉಪಸ್ಥಿತರಿರುವರು.