ತಿರುವನಂತಪುರಂ: ನಗರ ನೀತಿ ಆಯೋಗದ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಲಾಗಿದೆ.
ಮುಂದಿನ ವರ್ಷ ಮಾರ್ಚ್‌ನಲ್ಲಿ ಸಂಪೂರ್ಣ ನಗರ ನೀತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್, ನಗರ ನೀತಿ ಆಯೋಗದ ಅಧ್ಯಕ್ಷ ಡಾ ಎಂ ಸತೀಶ್ ಕುಮಾರ್ ಅವರು ಕರಡು ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದರು. ಆಯುಕ್ತ ಡಾ. ಇ ನಾರಾಯಣನ್, ಅಡ್ವ. ಎಂ.ಅನಿಲ್ ಕುಮಾರ್, ಡಾ. ಶರ್ಮಿಳಾ ಮೇರಿ ಜೋಸೆಫ್, ಡಾ. ವಿವೈಎನ್ ಕೃಷ್ಣಮೂರ್ತಿ, ವಿ ಸುರೇಶ್, ಡಾ. ಕೆಎಸ್ ಜೇಮ್ಸ್, ಹಿತೇಶ್ ವೈದ್ಯ ಮತ್ತು ಟಿಕಾಂತರ್ ಸಿಂಗ್ ಪನ್ವಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ತೀವ್ರಗತಿಯಲ್ಲಿ ನಗರೀಕರಣಗೊಳ್ಳುತ್ತಿರುವ ಕೇರಳಕ್ಕೆ ಸಮಗ್ರ ನಗರ ನೀತಿ ಅತ್ಯಗತ್ಯ ಎಂದು ಸ್ತ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಹೇಳಿದರು. ಕೇರಳ ಐತಿಹಾಸಿಕ ಹೆಜ್ಜೆ ಇಟ್ಟಿದೆ. ನಗರೀಕರಣದಿಂದ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಮತ್ತು ಜಯಿಸಲು ಆಯೋಗದ ಶಿಫಾರಸುಗಳು ಸಹಕಾರಿಯಾಗಲಿವೆ ಎಂದು ಸಚಿವರು ಹೇಳಿದರು.
ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ಜನಗಣತಿಯ ಮಾಹಿತಿಯ ಪ್ರಕಾರ 2035 ರ ವೇಳೆಗೆ ಕೇರಳದ 90 ಪ್ರತಿಶತ ಪ್ರದೇಶಗಳು ನಗರೀಕರಣಗೊಳ್ಳುತ್ತವೆ ಎಂದು ಅಂದಾಜಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಕೇರಳಕ್ಕೆ ನಗರ ನೀತಿಯನ್ನು ರೂಪಿಸಲು ನಿರ್ಧರಿಸಲಾಯಿತು, ಇದನ್ನು ಅನುಸರಿಸಿ ಡಿಸೆಂಬರ್ 2023 ರಲ್ಲಿ ನಗರ ನೀತಿ ಆಯೋಗವನ್ನು ರಚಿಸಲಾಗಿತ್ತು. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ತಜ್ಞರನ್ನು ಒಳಗೊಂಡ ಆಯೋಗವನ್ನು ರಚಿಸಲಾಗಿದೆ.