ತಿರುವನಂತಪುರಂ: ಅರ್ಹತೆ ಇಲ್ಲದೆ ಸಮಾಜ ಕಲ್ಯಾಣ ಪಿಂಚಣಿ ಪಡೆದು ವಂಚಿಸಿದವರ ವಿರುದ್ಧ ಸರ್ಕಾರ ಶಿಸ್ತು ಕ್ರಮವನ್ನು ಮುಂದುವರಿಸಿದೆ.
9 ಅರಣ್ಯ ಇಲಾಖೆ ನೌಕರರು ಅನರ್ಹ ರೀತಿಯಲ್ಲಿ ಸಮಾಜ ಕಲ್ಯಾಣ ಪಿಂಚಣಿ ಪಡೆದಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಆದೇಶ ಹೊರಡಿಸಿದ್ದಾರೆ. ಇವರಲ್ಲಿ ಒಬ್ಬ ಎಲ್‍ಡಿ ಟೈಪಿಸ್ಟ್, ವಾಚರ್ ಮತ್ತು ಏಳು ಅರೆಕಾಲಿಕ ಸ್ವೀಪರ್‍ಗಳನ್ನು ತನಿಖೆಗಾಗಿ ಅಮಾನತುಗೊಳಿಸಲಾಗಿದೆ.
ಅಕ್ರಮವಾಗಿ ಸಾಮಾಜಿಕ ಭದ್ರತೆ ಪಡೆದ ಕೃಷಿ ಇಲಾಖೆಯ 29 ನೌಕರರನ್ನು ಶನಿವಾರವಷ್ಟೇ ಅಮಾನತುಗೊಳಿಸಲಾಗಿತ್ತು. ಅನಧಿಕೃತವಾಗಿ ಸ್ವೀಕರಿಸಿದ ಮೊತ್ತವನ್ನು 18% ಬಡ್ಡಿಯೊಂದಿಗೆ ಅಧಿಕಾರಿಗಳಿಂದ ವಸೂಲಿ ಮಾಡಲಾಗುತ್ತದೆ. ಕೃಷಿ, ಕಂದಾಯ, ಪಶು ಕಲ್ಯಾಣ ಇಲಾಖೆಗಳ ನಂತರ ಅರಣ್ಯ ಇಲಾಖೆಯೂ ಕ್ರಮ ಕೈಗೊಂಡಿದೆ.
ಹಣಕಾಸು ಇಲಾಖೆ ವರದಿ ಪ್ರಕಾರ 1458 ಸರ್ಕಾರಿ ನೌಕರರು ಅಕ್ರಮವಾಗಿ ಕಲ್ಯಾಣ ಪಿಂಚಣಿ ಪಡೆದಿದ್ದಾರೆ.