AI ವಲಯದಲ್ಲಿ ಈಗಾಗಲೇ ಭಾರೀ ಸದ್ದು ಮಾಡಿರುವ ಓಪನ್‌ಎಐ (OpenAI) ಇದೀಗ ಸೋರಾ (Sora) ಎಂಬ ಕೃತಕ ಬುದ್ಧಿಮತ್ತೆ ಸೇವೆಯನ್ನು ಪರಿಚಯಿಸುತ್ತಿದೆ. ಈ ವ್ಯವಸ್ಥೆಯ ಮೂಲಕ ಟೆಕ್ಸ್ಟ್ ರೂಪದ ಪ್ರಾಂಪ್ಟ್‌ಗಳಿಂದ ನೈಜ್ಯವಾಗಿ ಕಾಣುವ ವಿಡಿಯೋಗಳನ್ನು ರಚಿಸಬಹುದಾಗಿದೆ. ಆಯ್ದ ಕೆಲವು ರಾಷ್ಟ್ರಗಳಲ್ಲಿ ಈ ಸೇವೆಯು ಲಭ್ಯ ಆಗಲಿದೆ.
ಹೌದು, ಓಪನ್‌ಎಐ (OpenAI) ಇದೀಗ ಸೋರಾ (Sora) ಹೆಸರಿನ ಟೆಕ್ಸ್ಟ್ - ಟು - ವಿಡಿಯೋ ಟೂಲ್ ಅನ್ನು ಪರಿಚಯಿಸಿದೆ. ಬಳಕೆದಾರರು ಟೆಕ್ಸ್ಟ್ ನೀಡಿದರೆ, ಇದು ಅನಿಯಮಿತ ವಿಡಿಯೋಗಳನ್ನು ಜನರೇಟ್ ಮಾಡಿ ನೀಡುತ್ತದೆ. ಚಾಟ್‌ಜಿಪಿಟಿ (ChatGPT) ಪ್ರೊ ಹಾಗೂ ಚಾಟ್‌ಜಿಪಿಟಿ ಪ್ಲಸ್ ಬಳಕೆದಾರರಿಗೆ ಈ ಸೇವೆಯು ಲಭ್ಯ ಇರಲಿದೆ. ಯುಎಸ್ ಸೇರಿದಂತೆ ಕೆಲವು ಆಯ್ದ ದೇಶಗಳಲ್ಲಿ ಇದು ಲಭ್ಯ.
ಅಂದಹಾಗೆ ಈ ನೂತನ ಆವೃತ್ತಿಯು 20 ಸೆಕೆಂಡ್‌ಗಳ ವರೆಗಿನ ವಿಡಿಯೋಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಆರಂಭದಲ್ಲಿ, ಸೋರಾ (Sora) ಲಭ್ಯತೆ ಇನ್ನೂ ಸೀಮಿತವಾಗಿರುತ್ತದೆ. ಚಾಟ್‌ಜಿಪಿಟಿ (ChatGPT) ಪ್ಲಸ್ ಚಂದಾದಾರಿಕೆಗಾಗಿ ಮಾಸಿಕ $20 ಪಾವತಿಸುವವರು ತಿಂಗಳಿಗೆ 50 ವೀಡಿಯೊಗಳನ್ನು ಜನರೇಟ್ ಮಾಡಲು ಸಾಧ್ಯವಾಗುತ್ತದೆ ಎಂದು ಓಪನ್‌ಎಐ (OpenAI) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ.
ಹಾಗೆಯೇ ಚಾಟ್‌ಜಿಪಿಟಿ (ChatGPT) ಪ್ರೊ ಚಂದಾದಾರಿಕೆಗಾಗಿ ಮಾಸಿಕ $200 ಪಾವತಿಸುವ ಗ್ರಾಹಕರು slower ಜನರೇಶನಗಳಿಗೆ ಅನಿಯಮಿತ ಆಕ್ಸಸ್ ಅನ್ನು ಪಡೆಯುತ್ತಾರೆ. ಅಲ್ಲದೇ 500 ವಿಡಿಯೋಗಳನ್ನು ವೇಗದಲ್ಲಿ ರಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಫೆಬ್ರವರಿಯಲ್ಲಿ ಸೀಮಿತ ಸಂಶೋಧನಾ ಪೂರ್ವವೀಕ್ಷಣೆಯಾಗಿ ಪ್ರಾರಂಭಿಸಲಾಗಿತ್ತು. ಸೋರಾ ಟರ್ಬೊ ಈಗ ಬಳಕೆದಾರರಿಗೆ ಮುಕ್ತವಾಗಿ ಆಕ್ಸಸ್ ಲಭ್ಯ ಇದೆ. ಚಂದಾದಾರರು ವೈಡ್‌ಸ್ಕ್ರೀನ್, ವರ್ಟಿಕಲ್ ಹಾಗೂ ಸ್ಕ್ವೇರ್‌ನಂತಹ ಸೆಟ್ ಆಗುವ ಫಾರ್ಮ್ಯಾಟ್‌ಗಳೊಂದಿಗೆ 1080p ವರೆಗಿನ ರೆಸಲ್ಯೂಶನ್‌ಗಳಲ್ಲಿ 20 ಸೆಕೆಂಡುಗಳ ವರೆಗಿನ ವಿಡಿಯೋಗಳನ್ನು ರಚಿಸಲು ಅವಕಾಶ ಇದೆ. ಚಾಲ್ತಿ ಇರುವ ಚಾಟ್‌ಜಿಪಿಟಿ ಪ್ಲಸ್ ಹಾಗೂ ಚಾಟ್‌ಜಿಪಿಟಿ ಪ್ರೊ ಬಳಕೆದಾರರಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಬಳಕೆ ಸಾಧ್ಯ.
ಚಂದಾದಾರಿಕೆ ಮಾಹಿತಿ
ಚಾಟ್‌ಜಿಪಿಟಿ ಪ್ರೊ ಚಂದಾದಾರರಿಗೆ ಮಾಸಿಕ ಶುಲ್ಕ $20 ಆಗಿದೆ. ಇದರಲ್ಲಿ 50 ಆದ್ಯತಾ ವೀಡಿಯೊಗಳು ಸಿಗಲಿವೆ (1,000 ಕ್ರೆಡಿಟ್‌ಗಳು), 720p ರೆಸಲ್ಯೂಶನ್ ಮತ್ತು 5s ಅವಧಿ ಲಭ್ಯ.
ಚಾಟ್‌ಜಿಪಿಟಿ (ChatGPT) ಪ್ರೊ ಚಂದಾದಾರರಿಗೆ ಮಾಸಿಕ ಶುಲ್ಕ $200 ಆಗಿದೆ. ಇದರಲ್ಲಿ 500 ಆದ್ಯತೆಯ ವೀಡಿಯೊಗಳು (10,000 ಕ್ರೆಡಿಟ್‌ಗಳು), ಅನಿಯಮಿತ ವೀಡಿಯೊಗಳು, 1080p ಪಿಕ್ಸಲ್ ರೆಸಲ್ಯೂಶನ್, 20s ಅವಧಿ ಮತ್ತು 5 ಏಕಕಾಲೀನ ಪೀಳಿಗೆಗಳು, ವಾಟರ್‌ಮಾರ್ಕ್ ಇಲ್ಲದೆ ಡೌನ್‌ಲೋಡ್ ಮಾಡಬಹುದು.
ಸಂಸ್ಥೆಯ ಮಾಹಿತಿ ಪ್ರಕಾರ, ಸೋರಾ (Sora) ಮೂಲಕ 1080p ಪಿಕ್ಸಲ್ ರೆಸಲ್ಯೂಶನ್, 20 ಸೆಕೆಂಡ್‌ಗಳ ವರೆಗಿನ ಪಡೆಯಬಹುದು. ಅಲ್ಲದೇ ವೈಡ್‌ಸ್ಕ್ರೀನ್, ವರ್ಟಿಕಲ್ ಹಾಗೂ ಸ್ಕ್ವೇರ್ ಆಕಾರ ಅನುಪಾತ ಮಾದರಿಯಲ್ಲಿ ವಿಡಿಯೋ ಜನರೇಟ್ ಸಹ ಮಾಡಬಹುದು. ಇದರೊಂದಿಗೆ ಚಂದಾದಾರರು ಕ್ರಿಯೆಟ್ ಮಾಡಿರುವ ವೀಡಿಯೊ ಅನ್ನು ಅವರ ಇಷ್ಟದಂತೆ ವಿಸ್ತರಿಸಲು ಅಥವಾ ಬದಲಾವಣೆ ಮಾಡಲು ಆಯ್ಕೆಗಳು/ ಅವಕಾಶಗಳು ಲಭ್ಯ.