ನವದೆಹಲಿ: ದೀರ್ಘಕಾಲದಿಂದ ಸೆರೆವಾಸ ಅನುಭವಿಸುತ್ತಿರುವ ಆರೋಪಿಗೆ, ಅರ್ಹತೆ ಆಧರಿಸಿ ಜಾಮೀನು ನೀಡಬೇಕು. ಆದರೆ, ವಿಚಾರಣೆಯನ್ನು ತ್ವರಿತಗೊಳಿಸುವಂತೆ ನಿರ್ದೇಶನ ನೀಡಲು ಇರುವ ಆಯ್ಕೆಯು ಇಂತಹ ಪ್ರಕರಣಗಳಲ್ಲಿ ಪರಿಹಾರವಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯಪೀಠ, ನವೆಂಬರ್ 25ರಂದು ನೀಡಿರುವ ತೀರ್ಪಿನಲ್ಲಿ ಈ ಮಾತು ಹೇಳಿದೆ.
ಬೇರೆಬೇರೆ ಹೈಕೋರ್ಟ್‌ಗಳು ಜಾಮೀನು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದು, ಇದು ಸಾಮಾನ್ಯವೆಂಬಂತೆ ಆಗಿದೆ. ವಿಚಾರಣೆ ಪೂರ್ಣಗೊಳಿಸಲು ಹೈಕೋರ್ಟ್‌ಗಳು ಕಾಲಮಿತಿ ನಿಗದಿ ಮಾಡುತ್ತಿವೆ. ಇಂತಹ ನಿರ್ದೇಶನಗಳು ವಿಚಾರಣಾ ನ್ಯಾಯಾಲಯಗಳ ಕಾರ್ಯವೈಖರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ' ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
'ವಿಶೇಷ ಸಂದರ್ಭಗಳಲ್ಲಿ, ಪ್ರಕರಣದ ತ್ವರಿತ ವಿಚಾರಣೆಗೆ ನಿರ್ದೇಶನ ನೀಡಬಹುದಾಗಿದೆ. ಆದರೆ, ಸಂವಿಧಾನ ಪೀಠ ರೂಪಿಸಿರುವ ಕಾಯ್ದೆಯನ್ನು ಗಮನಿಸದೇ, ಹೈಕೋರ್ಟ್‌ಗಳು ಇಂತಹ ನಿರ್ದೇಶನಗಳನ್ನು ನೀಡುವುದು ವಾಡಿಕೆ ಎಂಬಂತಾಗಿದೆ' ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.