ಪತ್ತನಂತಿಟ್ಟ: ಶಬರಿಮಲೆ ಸನ್ನಿಧಿಯಲ್ಲಿ ಆಯುರ್ವೇದ ಆಸ್ಪತ್ರೆಯ ವಿಸ್ತೃತ ಸೌಲಭ್ಯಗಳನ್ನು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಸೋಮವಾರ ಉದ್ಘಾಟಿಸಿದರು.
ಮಾದಕ ದ್ರವ್ಯ ಸೇವಿಸಿದ 1563 ಜನರ ವಿರುದ್ಧ ಕ್ರಮ:
ಸಿಗರೇಟ್, ಪಾನ್ಮಸಾಲದಂತಹ ಅಮಲು ಪದಾರ್ಥಗಳನ್ನು ಬಳಸುತ್ತಿದ್ದ ಶಬರಿಮಲೆಯ ವಿವಿಧ ಪ್ರದೇಶಗಳ 1563 ಜನರ ವಿರುದ್ಧ 22 ದಿನಗಳೊಳಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಸಿಗರೇಟ್, ಪಾನ್ ಮಸಾಲಾ ಮತ್ತು ಸಿಗಾರ್‍ಗಳಂತಹ ತಂಬಾಕು ಉತ್ಪನ್ನಗಳನ್ನು ಬಳಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸನ್ನಿಧಾನ, ಪಂಬಾ, ನಿಲಕ್ಕಲ್ ಮತ್ತಿತರ ಪ್ರದೇಶಗಳಲ್ಲಿ ಅಬಕಾರಿ ತಂಡ ಏಕಾಂಗಿಯಾಗಿ ಹಾಗೂ ಪೋಲೀಸ್, ಮೋಟಾರು ವಾಹನ ಹಾಗೂ ಅರಣ್ಯ ಇಲಾಖೆಗಳ ಸಹಕಾರದಲ್ಲಿ 13 ಕೆಜಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಇವುಗಳನ್ನು ಬಳಸಿ ಮಾರಾಟ ಮಾಡಿದ ಆರೋಪಿಗಳಿಂದ 3,12,600 ರೂ.ಗಳ ದಂಡ ವಸೂಲಿ ಮಾಡಲಾಗಿದ್ದು, ಈವರೆಗೆ ವಿವಿಧ ಇಲಾಖೆಗಳಿಂದ 271 ದಾಳಿಗಳನ್ನು ನಡೆಸಲಾಗಿದೆ ಎಂದು ಅಬಕಾರಿ ಸಹಾಯಕ ಆಯುಕ್ತ ಎಚ್.ನೂರುದ್ದೀನ್ ಮಾಹಿತಿ ನೀಡಿದರು