ಈ ಬಯೋಬ್ಯಾಂಕ್ ಮಧುಮೇಹ ಮತ್ತು ಇತರ ಸಂಬಂಧಿತ ಸಮಸ್ಯೆಗಳ ವಿರುದ್ಧ ಬದಲಾವಣೆ ತರುವ ಉದ್ದೇಶ ಹೊಂದಲಾಗಿದೆ. ಹಾಗೆ ಅಧ್ಯಯನದ ದೃಷ್ಟಿಯಿಂದ ಬಯೋಬ್ಯಾಂಕ್‌ನಲ್ಲಿ ಮಾದರಿಗಳ ಸಂಗ್ರಹಿಸಲಾಗುತ್ತದೆ. ಹಾಗೆ ಸಂಸ್ಕರಣೆ, ವಿಶ್ಲೇಷಣೆ, ವಿವರಣೆಯಂತಹ ಕೆಲಸಗಳು ನಡೆಯಲಿದೆ. ಇದರಲ್ಲಿ ಮಧುಮೇಹಕ್ಕೆ ಕಾರಣವಾಗುವ ಅಂಶಗಳು, ಪರಿಹಾರಗಳು, ಚಿಕಿತ್ಸಾ ವಿಧಾನ ಅರಿಯಲು ಸಹಕಾರಿಯಾಗಲಿದೆ.
ಚೆನ್ನೈನಲ್ಲಿ ಸ್ಥಾಪಿಸಲಾದ ಮೊದಲ ಮಧುಮೇಹ ಬಯೋಬ್ಯಾಂಕ್ ಹೊಸ ಬಯೋಮಾರ್ಕರ್‌ಗಳನ್ನು ಗುರುತಿಸಲು ಮತ್ತು ಮಧುಮೇಹದ ಆರಂಭಿಕ ಚಿಕಿತ್ಸೆಗೆ ಸಹಾಯ ಮಾಡುವ ಗುರಿಯನ್ನು ಹೊಂದಲಾಗಿದೆ. ಇದು ಭಾರತದಲ್ಲಿನ ವಿಶಿಷ್ಟ ಮಧುಮೇಹ ಪ್ರಕರಣಗಳ ಕುರಿತ ಅಧ್ಯಯನ ಹಾಗೂ ಚಿಕಿತ್ಸೆಗೂ ನೆರವಾಗಲಿದೆ.
ಅಂಕಿ ಅಂಶಗಳ ಪ್ರಕಾರ 10 ಕೋಟಿಗೂ ಹೆಚ್ಚು ಮಧುಮೇಹ ರೋಗಿಗಳು ಮತ್ತು 13.6 ಕೋಟಿ ಪ್ರಿಡಿಯಾಬಿಟಿಸ್ ಪ್ರಕರಣಗಳಿವೆ. ಇದು ವಿಶ್ವದ ಅತಿ ಹೆಚ್ಚು ಸಂಖ್ಯೆಯಾಗಿದೆ. ಆದರೆ ಮಧುಮೇಹ ಸಂಶೋಧನೆಗೆ ಸಹಾಯ ಮಾಡಲು ಜೈವಿಕ ಮಾದರಿಗಳ ದೊಡ್ಡ ಪ್ರಮಾಣದ ರೆಪೊಸಿಟರಿಗಳ ಕೊರತೆ ಇತ್ತು. ಆದರೆ ಅದರ ಸಣ್ಣ ಪ್ರಮಾಣ ಈಗ ಕಡಿಮೆಯಾದಂತಾಗಿದೆ.
ಮಧುಮೇಹ ಬಯೋಬ್ಯಾಂಕ್‌ನಲ್ಲಿ ಸುಮಾರು 75 ಸಾವಿರ ರಕ್ತದ ಮಾದರಿಗಳು ಮತ್ತು 10 ಸಾವಿರ ಸೀರಮ್ ಮಾದರಿಗಳನ್ನು ಸಂರಕ್ಷಿಸಲಾಗಿದೆ. ಇದಲ್ಲದೆ 16,000 ಜೆನೆಟಿಕ್ ಮಾದರಿಗಳು ಮತ್ತು 5,000 ಮೂತ್ರದ ಮಾದರಿಗಳನ್ನು ಸಂರಕ್ಷಿಸಲಾಗಿದೆ. ಇದು ಅತೀ ದೊಡ್ಡ ಬಯೋ ಬ್ಯಾಂಕ್ ಎಂಬ ಕೀರ್ತಿ ಪಡೆಯಲು ಕಾರಣವಾಗಿದೆ. ಇಷ್ಟು ಪ್ರಮಾಣದಲ್ಲಿನ ಮಾದರಿಗಳನ್ನು ಮುಂದಿನ ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಜೈವಿಕ ಬ್ಯಾಂಕ್‌ಗಳು ಏಕೆ ಮುಖ್ಯವಾಗುತ್ತವೆ?
ಕ್ಯಾನ್ಸರ್ ಮತ್ತು ಯಕೃತ್ತಿನ ಕಾಯಿಲೆಯಂತಹ ಮಾರಣಾಂತಿಕ ಕಾಯಿಲೆಗಳಿಗೆ ಭಾರತವು ಜೈವಿಕ ಬ್ಯಾಂಕ್‌ಗಳನ್ನು ಹೊಂದಿದೆ. ಆದರೆ ಮಧುಮೇಹಕ್ಕೆ ಯಾವುದೇ ಬಯೋಬ್ಯಾಂಕ್‌ಗಳಿರಲಿಲ್ಲ. ಅಲ್ಲದೆ ಮಧುಮೇಹ ಕುರಿತ ಅಗತ್ಯ ಚಿಕಿತ್ಸೆ, ಸಂಶೋಧನೆಗೆ ಸೂಕ್ತ ಬ್ಯಾಂಕ್‌ನ ಅಗತ್ಯತೆ ಹೆಚ್ಚಾಗಿತ್ತು. ಮಧುಮೇಹದ ಬಗ್ಗೆ ಹೆಚ್ಚಾಗಿ ಅರಿಯಲು ಕಾಯಿಲೆಯ ಕುರಿತಂತೆ ಒಂದಿಷ್ಟು ಅಂಶಗಳ ಕಲೆ ಹಾಕಲು ಈ ಬಯೋಬ್ಯಾಂಕ್‌ಗಳು ನೆರವಾಗಲಿವೆ.
ಐಸಿಎಂಆರ್ ಮತ್ತು ಇಂಡಿಯಾ ಡಯಾಬಿಟಿಸ್ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ 11 ಕೋಟಿಗೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 13 ಕೋಟಿಗೂ ಹೆಚ್ಚು ಜನರಿಗೆ ಮಧುಮೇಹವಿದೆ ಎಂದು ಶಂಕಿಸಲಾಗಿದೆ. ಗೋವಾ ಭಾರತದಲ್ಲಿ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದೆ (ಶೇ. 26.4). ಅದರ ನಂತರ, ಪುದುಚೇರಿಯಲ್ಲಿ 26.3 ಪ್ರತಿಶತ ಮತ್ತು ಕೇರಳದಲ್ಲಿ 25.5 ರಷ್ಟು ಮಧುಮೇಹಿಗಳಿದ್ದಾರೆ.