ಕಾಸರಗೋಡು: ಉದುಮ ಕುರುಕನ್‍ಕುನ್ನು ವಯನಾಟ್ಟು ಕುಲವನ್ ತೆಯ್ಯಂಕೆಟ್ಟ್ ಮಹೋತ್ಸವದ ಅಂಗವಾಗಿ ಕುಲಬಾಂಧವರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ತರಕಾರಿ ಕೃಷಿಗೆ ಬಿತ್ತನೆ ಕಾರ್ಯ ನೆರವೇರಿಸಲಾಯಿತು. ವಯನಾಟುಕುಲವನ್ ಮಹೋತ್ಸವಕ್ಕೆ ಬಳಸಲಾಗುವ ತರಕಾರಿ ಕೃಷಿಯನ್ನು ಸಾವಯವ ರೀತಿಯಲ್ಲಿ ಸ್ವಂತವಾಗಿ ತಯಾರಿಸುವ ನಿಟ್ಟಿನಲ್ಲಿ ತರಕಾರಿ ಲೃಷಿ ನಡೆಸಲಾಗುತ್ತಿದೆ.
ಮೇಲಿನಬಾರ ಮೋಟಮ್ಮಲ್ ತರವಾಡಿನ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಉದುಮ ಗ್ರಾಮ ಪಂಚಾಯಿತಿ ಕೃಷಿ ಅಧಿಕಾರಿ ನಾಣು ಕುಟ್ಟನ್ ತರಕರಿ ಬೀಜ ಬಿತ್ತನೆ ನಿರ್ವಹಿಸಿದರು. ವಾರ್ಡ್ ಸದಸ್ಯ ಸುನೀಲ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು
ಶಿಬು ಕಡವಂಗಾನಂ, ನಾರಾಯಣನ್ ಕಿಯಕ್ಕೆವಳಪ್ಪು, ಗಂಗಾಧರನ್ ನಾಯರ್‍ಮುತಿರ ವಳಪ್, ಕುಞÂರಾಮನ್ ಕಿಯಕ್ಕೇಕರ, ತರವಾಡು ಕಾರ್ನವರ್ ನಾರಾಯಣನ್ ಮೊಟ್ಟಮ್ಮಾಳ್ ಮತ್ತು ತರವಾಡ ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು.