ಬದಿಯಡ್ಕ: ಸುಪ್ರಸಿದ್ಧ ಭಟ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕ ಅಧ್ಯಕ್ಷ ಎ.ಶ್ಯಾಮ ಭಟ್ ಇವರು ತಮ್ಮ ಆತ್ಮೀಯರಾದ ಕವಿ ಪೊಟ್ಟಿಪ್ಪಲ ನಾರಾಯಣ ಭಟ್ ಇವರ ಸ್ಮರಣಾರ್ಥ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ನೀಡುತ್ತಿರುವ ವಿದ್ಯಾರ್ಥಿವೇತನದ 2024-25ನೇ ಸಾಲಿನ ವಿದ್ಯಾರ್ಥಿವೇತನ ಪ್ರದಾನ ಕಾರ್ಯಕ್ರಮ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಶಾಲಾ ಸಭಾ ಭವನದಲ್ಲಿ ಬುಧವಾರ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನವನ್ನು ವಿತರಿಸಿ ಶ್ಯಾಮ ಭಟ್ ಮಾತನಾಡಿ, ತಮ್ಮ ಜೀವನದುದ್ದಕ್ಕೂ ಬೆಂಬಲವಾಗಿ ನಿಂತ ದಿ ಪೊಟ್ಟಿಪ್ಪಲ ನಾರಾಯಣ ಭಟ್ ಅವರನ್ನು ಸ್ಮರಿಸಿದರು. ತಮ್ಮ ಜೀವನವನ್ನೇ ಉದಾಹರಣೆಯನ್ನಾಗಿಸಿ, ಕಠಿಣ ಪರಿಶ್ರಮ ಹಾಗೂ ದೃಢ ವಿಶ್ವಾಸದ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎಂದರು.
ವಿದ್ಯಾರ್ಥಿವೇತನ ಪಡೆದುಕೊಂಡ 8ನೇ ತರಗತಿಯ ದೀಕ್ಷಿತ್ ಹಾಗೂ 9ನೇ ತರಗತಿಯ ಹರ್ಷಿತಾ ಪಿ. ಕೃತಜ್ಞತೆ ಅರ್ಪಿಸಿದರು. ವೇದಿಕೆಯಲ್ಲಿ ಪೊಟ್ಟಿಪ್ಪಲ ಡಾ. ಗಿರೀಶ್, ಡಾ. ವಾಣಿಶ್ರೀ, ಡಾ. ಬೇ.ಸೀ.ಗೋಪಾಲಕೃಷ್ಣ ಭÀಟ್, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಉಪಸ್ಥಿತರಿದ್ದರು.