ಫ್ಯಾರಿಸ್: ದೇಶದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನವಾಗಿ ಫ್ರಾನ್ಸ್ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಫ್ರಾಂಕೊಯಿಸ್ ಬೈರೂ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿದ್ದಾರೆ.
ದಶಕದಿಂದಲೂ ಫ್ರೆಂಚ್ ರಾಜಕಾರಣದಲ್ಲಿ ಖ್ಯಾತರಾಗಿರುವ ಬೈರೂ (73), ಮ್ಯಾಕ್ರನ್ ಅವರ ಮೈತ್ರಿಕೂಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಬೈರೂ ನೂತನ ಸರ್ಕಾರ ರಚಿಸಲಿದ್ದಾರೆ ಎಂದು ಮ್ಯಾಕ್ರನ್ ಅವರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ನೂತನ ಸಚಿವರ ಆಯ್ಕೆಗೂ ಮುನ್ನ, ಬೈರೂ ವಿವಿಧ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಜೆಟ್ ವಿವಾದ ಉಲ್ಬಣಗೊಂಡಿದ್ದರಿಂದ, ಹಿಂದಿನ ಪ್ರಧಾನಿ ಮೈಕೆಲ್ ಬರ್ನಿಯರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಅವರು ಕಳೆದ ವಾರ ರಾಜೀನಾಮೆ ನೀಡಿದ್ದರು.