ನವದೆಹಲಿ: ಕೇರಳದ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ಏಕಾದಶಿಯಂದು 'ಉದಯಾಸ್ತಮಾನ ಪೂಜೆ'ಯನ್ನು ಕೈಬಿಡಲು ನಿರ್ಧರಿಸಿದ ಆಡಳಿತ ಮಂಡಳಿಯ ನಿರ್ಧಾರವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ರಾಜೇಶ್ ಬಿಂದಾಲ್ ಅವರನ್ನು ಒಳಗೊಂಡ ನ್ಯಾಯಪೀಠವು, ಈ ಸಂಬಂಧ ಗುರುವಾಯೂರು ದೇವಸ್ವ ಮಂಡಳಿ, ಕೇರಳ ಸರ್ಕಾರ ಮತ್ತು ಇತರರಿಗೆ ನೋಟಿಸ್ ರವಾನಿಸಿದೆ.
'ನಿತ್ಯವೂ ನಡೆಯುವ ಪೂಜೆಗಳ ಬಗ್ಗೆ ದೇಗುಲದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಕೋಷ್ಠಕವನ್ನು ಬದಲಾಯಿಸುವಂತಿಲ್ಲ' ಎಂದು ಕೋರ್ಟ್ ತಿಳಿಸಿದೆ.
'ಈಗಲೇ ನಾವು ಮಧ್ಯಪ್ರದೇಶ ಮಾಡುವುದಿಲ್ಲ. ಪ್ರತಿವಾದಿಗಳಿಗೆ ನೋಟಿಸ್ ರವಾನಿಸುತ್ತೇವೆ' ಎಂದು ನ್ಯಾಯಪೀಠ ತಿಳಿಸಿತು.
ಏಕಾದಶಿಯಂದು ಉದಯಾಸ್ತಮಾನ ಪೂಜೆ ಮಾಡಿದಲ್ಲಿ ಜನದಟ್ಟಣೆಯನ್ನು ನಿಭಾಯಿಸುವುದು ಕಷ್ಟ ಎಂಬ ಕಾರಣಕ್ಕೆ ಈ ಪೂಜೆಯನ್ನು ಕೈಬಿಡಲು ಇತ್ತೀಚೆಗೆ ಆಡಳಿತ ಮಂಡಳಿ ನಿರ್ಧರಿಸಿತ್ತು.