ಮಂಜೇಶ್ವರ : 'ಕ್ರಿಸ್ಮಸ್ ಸ್ನೇಹ ಮಿಲನ - 2024'ಕಾರ್ಯಕ್ರಮ ಮಂಜೇಶ್ವರದ ಸ್ನೇಹಾಲಯದಲ್ಲಿ ಜರುಗಿತು. ಹೊಸಂಗಡಿ ಇನ್ ಫೆಂಟ್ ಜೀಸಸ್ ಚರ್ಚ್ ನ ಫಾದರ್ ಲೂಯಿಸ್ ಮರಿಯದಾಸ್ ಕೇಕ್ ಕತ್ತರಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು. ಸ್ನೇಹಾಲಯದ ಸಂಸ್ಥಾಪಕ ಬ್ರದರ್ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಸ್ನೇಹಾಲಯ ಅನಾಥಾಶ್ರಮ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದೇವಯ್ಯ ಐ. ಪಿ.ಎಸ್ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಸರ್ಜನ್ ಡಾ. ಶಿವಪ್ರಕಾಶ್ ಡಿ. ಎಸ್, ಯುವ ವಾಗ್ಮಿ ರಫೀಕ್ ಮಾಸ್ಟರ್, ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಮುಂಬಯಿ ಉದ್ಯಮಿ, ಕೊಡುಗೈ ದಾನಿ ಜೋಸೆಫ್ ಎಲಿಯಾಸ್ ಮೇನೇಜಸ್ ರನ್ನು ಸೇರಿದಂತೆ ಸ್ನೇಹಾಲಯದ ಸರ್ವತೋಮುಖ ಅಭಿವದ್ಧಿಗೆ ಸಹಕರಿಸಿದ ಹಲವಾರು ಮಂದಿ ದಾನಿಗಳನ್ನು ಗೌರವಿಸಲಾಯಿತು. ಸ್ನೇಹಾಲಯದ ಸಂಸ್ಥಾಪಕ ಬ್ರದರ್ ಜೋಸೆಫ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಖ್ಯಾತ ನಿರೂಪಕ ಜಿಯೋ ಡಿ' ಸಿಲ್ವಾ ಕಾರ್ಯಕ್ರಮ ನಿರೂಪಿಸಿದರು. ಸ್ನೇಹಾಲಯದ ಕಾರ್ಯದರ್ಶಿ ಕೊಲಿವೀಯ ಕ್ರಾಸ್ತ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಜಿ. ಜಿ. ಹಂಡ್ರೆಡ್ ಕೋರಸ್ ಟೀಮ್ ಮಂಗಳೂರು ಇವರಿಂದ ಸಂಗೀತ ರಸ ಮಂಜರಿ ನಡೆಯಿತು.