ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯ (ಯುಪಿಎಸ್‌ಸಿ) ತರಬೇತುದಾರ ಹಾಗೂ ಸ್ಫೂರ್ತಿದಾಯಕ ಭಾಷಣಕಾರ ಅವಧ್ ಓಜಾ ಅವರು ಸೋಮವಾರ ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದರು. ಕಾರ್ಯಕ್ರಮದಲ್ಲಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಹಾಗೂ ಹಿರಿಯ ನಾಯಕ ಮನೀಷ್ ಸಿಸೋಡಿಯಾ ಈ ಸಂದರ್ಭದಲ್ಲಿ ಇದ್ದರು.
ಶಿಕ್ಷಣದ ಅಭಿವೃದ್ಧಿಯೇ ನನ್ನ ಮಹತ್ವಾಕಾಂಕ್ಷೆಯಾಗಿದೆ. ಮಕ್ಕಳ ಭವಿಷ್ಯವನ್ನು ಕೇಂದ್ರೀಕರಿಸಿರುವ ಪಕ್ಷದ ಸಿದ್ಧಾಂತದೊಂದಿಗೆ ನಾನು ಕೈಜೋಡಿಸಿದ್ದೇನೆ. ರಾಜಕೀಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಅರವಿಂದ ಕೇಜ್ರಿವಾಲ್ ಹಾಗೂ ಮನೀಷ್ ಸಿಸೋಡಿಯಾ ಅವರಿಗೆ ಧನ್ಯವಾದ ತಿಳಿಸುತ್ತೇನೆ' ಎಂದು ಓಜಾ ಹೇಳಿದರು.
'ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಅವರು 'ಎಎಪಿಯು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿದೆ. ಓಜಾ ಅವರು ಪಕ್ಷ ಸೇರಿರುವುದರಿಂದ ಶಿಕ್ಷಣವನ್ನು ಬಲಪಡಿಸುವ ಪಕ್ಷದ ಪ್ರಯತ್ನಗಳನ್ನು ಇನ್ನಷ್ಟು ಬಲಗೊಳಿಸಲಿದೆ. ಇದರಿಂದ ರಾಷ್ಟ್ರವು ಸದೃಢಗೊಳ್ಳಲಿದೆ' ಎಂದರು.