ನವದೆಹಲಿ: 'ಜನರು ನಮ್ಮನ್ನು ಸಂಸತ್ತಿಗೆ ಯಾಕಾಗಿ ಚುನಾಯಿಸಿ ಕಳುಹಿಸುತ್ತಾರೆ ಎಂಬುದನ್ನು ಚಿಂತಿಸುವಂತೆ ಜನರೇ ರಾಜಕಾರಣಿಗಳ ಮೇಲೆ ಒತ್ತಡ ಹೇರಲಿದ್ದಾರೆ' ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಭಾನುವಾರ ಹೇಳಿದರು.
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸೂಕ್ತ ರೀತಿಯಲ್ಲಿ ಚರ್ಚೆಗಳು ನಡೆಯದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಧನಕರ್ ಅವರು, 'ಚರ್ಚೆ ನಡೆಸುವಂತೆ ಸಂಸದರ ಮೇಲೆ ಹೊಣೆಗಾರಿಕೆ ನಿಗದಿಪಡಿಸಬೇಕು.
ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಮಾತುಕತೆ ಹಾಗೂ ಅಭಿವ್ಯಕ್ತಿಯು ಜೊತೆ ಜೊತೆಗೆ ಸಾಗಬೇಕು' ಎಂದರು.