ನವದೆಹಲಿ: ಭತಾನ್ ದೊರೆ ಜಿಗ್ಮ್ ಖೇಸರ್ ನಮ್ಗೇಲ್ ವಾಂಗ್‌ಚುಕ್ ಅವರು ಡಿ.5ರಂದ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ದೃಢವಾಗಿರುವ ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ವೃದ್ಧಿ ಉದ್ದೇಶದಿಂದ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ.
ದೊರೆ ತಮ್ಮ ಪತ್ನಿ ರಾಣಿ ಜೆಟ್ಸುನ್ ಪೆಮಾ ವಾಂಗ್‌ಚುಕ್ ಹಾಗೂ ಭೂತಾನ್ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಆಗಮಿಸುವರು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
'ಭತಾನ್ ದೊರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ' ಎಂದು ತಿಳಿಸಿದೆ.
ಭಾರತ ಮತ್ತು ಭೂತಾನ್ ನಡುವೆ ಪರಸ್ಪರ ತಿಳುವಳಿಕೆ ಮತ್ತು ನಂಬಿಕೆಯಿಂದ ವಿಶಿಷ್ಟವಾದ ಸ್ನೇಹ ಮತ್ತು ಸಹಕಾರದ ಅನನ್ಯ ಸಂಬಂಧಗಳಿವೆ' ಎಂದು ಅದು ಹೇಳಿದೆ.