ಶಬರಿಮಲೆ: ಶಬರಿಮಲೆ ಸನ್ನಿಧಾನದಲ್ಲಿ ಮುಂದಿನ ವರ್ಷ ಹಿರಿಯ ಮಹಿಳೆಯರು ಮತ್ತು ಮಕ್ಕಳ ವಿಶ್ರಾಂತಿ ಕೇಂದ್ರವನ್ನೂ ಸಿದ್ಧಪಡಿಸಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ. ಪಂಪಾದಲ್ಲಿ ಭಾನುವಾರ ತೆರೆಯಲಾದ ಫೆಸಿಲಿಟೇಶನ್ ಸೆಂಟರ್ ಮಾದರಿಯಲ್ಲಿಯೇ ನೂತನ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಶಬರಿಮಲೆಯಲ್ಲಿ ಮಕ್ಕಳಿಗಾಗಿ ಮಾತ್ರ ಸ್ಥಾಪಿಸಿರುವ ಸರತಿ ಸಾಲು ವ್ಯವಸ್ಥೆಯನ್ನು ಮುಂದಿನ ವರ್ಷ ವಿಸ್ತರಿಸಲಾಗುವುದು ಎಂದರು.
ಮಕ್ಕಳು ಸರತಿ ಸಾಲಿನಲ್ಲಿ ನಿಲ್ಲದೆ ಅಯ್ಯಪ್ಪನ ದರ್ಶನ ಪಡೆಯಲು ಕುಟ್ಟಿ ಗೇಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುಂದಿನ ವರ್ಷ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು. ಮಕ್ಕಳೊಂದಿಗೆ ಬರುವ ವಯಸ್ಕರು ನಿರ್ದೇಶನದಂತೆ ವ್ಯವಸ್ಥೆಯನ್ನು ಬಳಸಬೇಕು ಎಂದು ದೇವಸ್ವಂ ಮಂಡಳಿ ಅಧ್ಯಕ್ಷರು ವಿನಂತಿಸಿದ್ದಾರೆ.
ಹಿಂದಿನ ಮಂಡಲ ಅವಧಿಗೆ ಹೋಲಿಸಿದರೆ ಈ ಬಾರಿ 15 ಲಕ್ಷ ಹೆಚ್ಚು ವೀಕ್ಷಕರ ನಿರೀಕ್ಷೆಯಿದೆ. ಹಾಗಾಗಿ ನಿಲಕ್ಕಲ್ ನಿಂದ ಸೋಪಾನಂ ವರೆಗೆ ಈ ಬಾರಿ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಪಂಪಾ ಮತ್ತು ನಿಲಕ್ಕಲ್ ನಲ್ಲಿ ಹೆಚ್ಚುವರಿ ಪಾರ್ಕಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಪಂಪಾದಲ್ಲಿರುವ ಗಣೇಶ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮೂರು ಕಾಲುದಾರಿಗಳು ಮತ್ತು ಮಹಿಳೆಯರಿಗೆ ವಿಶ್ರಾಂತಿ ಕೇಂದ್ರವನ್ನು ನಿರ್ಮಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತವರಿಗೆ ಬಿಸಿನೀರು, ಬಿಸ್ಕತ್ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ವರ್ಚುವಲ್ ಸರತಿಯನ್ನು ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸುವುದರಿಂದ ಭಕ್ತರು ಪ್ರತಿದಿನ ಸನ್ನಿಧಾನವನ್ನು ತಲುಪಬಹುದು ಎಂದು ಹೇಳಿದರು.
ಶಬರಿಮಲೆಯಲ್ಲಿ ಮುಖ್ಯ ಪ್ರಸಾದವಾದ ಅರವಣ ಮತ್ತು ಉಣ್ಣಿಯಪ್ಪವನ್ನು ಅನಿಯಂತ್ರಿತವಾಗಿ ವಿತರಿಸಲಾಗುತ್ತದೆ. ಮಂಡಲ ಅವಧಿಯ ಆರಂಭದಲ್ಲಿ 40 ಲಕ್ಷ ಅರವಣ ಟಿನ್‍ಗಳು ಮೀಸಲು ಇದ್ದವು. ಇನ್ನೂ 25 ಲಕ್ಷ ಟಿನ್‍ಗಳು ದಾಸ್ತಾನಿದ್ದು, ದಿನಕ್ಕೆ 3.5 ಲಕ್ಷ ಅರವಣ ಟಿನ್‍ಗಳು ಮಾರಾಟವಾಗುತ್ತಿವೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.