HEALTH TIPS

ಫ್ರಾನ್ಸ್ | ಶೀಘ್ರದಲ್ಲೇ ನೂತನ ಪ್ರಧಾನಿ ನೇಮಕ: ಮ್ಯಾಕ್ರನ್

ಪ್ಯಾರಿಸ್: ಫ್ರಾನ್ಸ್‌ನ ನೂತನ ಪ್ರಧಾನ ಮಂತ್ರಿಯನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. 

ಅದೇ ಹೊತ್ತಿಗೆ 2027ರವರೆಗೆ ತಮ್ಮ ಅಧಿಕಾರವಧಿ ಪೂರ್ಣಗೊಳಿಸುವುದಾಗಿ ಮ್ಯಾಕ್ರನ್ ತಿಳಿಸಿದ್ದಾರೆ.

ಫ್ರಾನ್ಸ್‌ ಪ್ರಧಾನಿ ಮಿಷೆಲ್ ಬರ್ನಿಯರ್ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದೆ.

ಇದರಿಂದ ಅವರು ಅಧಿಕಾರದಿಂದ ಪದಚ್ಯುತಗೊಂಡಿದ್ದಾರೆ. 1962ರ ಬಳಿಕ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯಕ್ಕೆ ಯಶಸ್ಸು ದೊರೆತಿದೆ.

ಹೊಸ ಸರ್ಕಾರ ರಚನೆ ಆಗುವವರೆಗೂ ಉಸ್ತುವಾರಿ ಪ್ರಧಾನಿಯಾಗಿ ಮಿಷೆಲ್ ಬರ್ನಿಯರ್ ಮುಂದುವರಿಯಬೇಕು ಎಂದು ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್ ಅವರು ಸೂಚಿಸಿದ್ದಾರೆ.

ಅವಿಶ್ವಾಸ ನಿರ್ಣಯಕ್ಕೆ ಗೆಲುವಾದ ಹಿಂದೆಯೇ ಬರ್ನಿಯರ್ ಮತ್ತು ಅವರ ಸಂಪುಟ ಸದಸ್ಯರು ರಾಜೀನಾಮೆ ಸಲ್ಲಿಸಿದರು. ನಿರ್ಣಯದ ಪರ 331 ಮತಗಳು ಬಂದವು. ಅಂಗೀಕಾರಕ್ಕೆ ಒಟ್ಟು 288 ಮತಗಳ ಅಗತ್ಯವಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries