ಕಾಸರಗೋಡು: ಕಳೆದ 13ವರ್ಷಗಳಿಂದ ಪಿಂಚಣಿಯಲ್ಲಿ ಯಾವುದೇ ಹೆಚ್ಚಳವಾಗದಿರುವುದರಿಂದ ಕೆಎಸ್ಸಾರ್ಟಿಸಿ ಪಿಂಚಣಿದಾರರ ಬದುಕು ದುಸ್ತರವಾಗಿದ್ದು, ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಮಂಗಳವಾರ ಆರಂಭಗೊಂಡ ಅನಿರ್ಧಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಕಾಸರಗೋಡು ಡಿಪೋ ವಠಾರದಲ್ಲಿ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಯಿತು.
ಪಿಂಚಣಿದಾರರ ಸಂಘಟನೆ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ.ವಿ ಕುಞÂರಾಮನ್ ಧರಣಿ ಉದ್ಘಾಟಿಸಿದರು. ಟಿ. ಪದ್ಮನಾಭನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ ನಾರಾಯಣನ್ ಉಪಸ್ಥಿತರಿದ್ದರು. ಕೆ. ರಾಮಕೃಷ್ಣನ್ ಸ್ವಾಗತಿಸಿದರು. ಕೆ.ವಿ. ಕುಞÂರಾಮನ್ ವಂದಿಸಿದರು
ಪಿಂಚಣಿ ವಿತರಣೆಯನ್ನು ಸರ್ಕಾರವೇ ಕ್ಯಗೆತ್ತಿಕೊಂಡು ಪ್ರತಿ ತಿಂಗಳ ಒಂದನೇ ತಾರೀಕಿಗೆ ವಿತರಸಬೇಕು, ವೇತನ ಪರಿಷ್ಕರಣೆಯ ಅದೇ ಮಾನದಂಡದಲ್ಲಿ ಪಿಂಚಣಿಯನ್ನೂ ಒಳಪಡಿಸಬೇಕು, ಕಡಿತಗೊಳಿಸಿದ ಶೇ.3 ಕ್ಷಾಮಭತ್ತೆ ಶೀಘ್ರ ವಿತರಿಸಬೇಕು, ಓಣಂ ಉತ್ಸವ ಭತ್ತೆಯನ್ನು ಕೆಎಸ್ಸಾರ್ಟಿಸಿ ಪಿಂಚಣಿದಾರರಿಗೂ ಒದಗಿಸಬೇಕು, 2022ರಲ್ಲಿ ನಿವೃತ್ತರಾಗಿರುವ ನ್ವಕರರ ಪಿಂಚಣಿ ಸಮಸ್ಯೆ ಪರಿಹರಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ರಾಜ್ಯವ್ಯಾಪಕವಾಗಿ ಧರಣಿ ಆಯೋಜಿಸಲಾಗಿತ್ತು.