ನವದೆಹಲಿ: ಭಾರತವು ಇದೇ ಮೊದಲ ಬಾರಿಗೆ ಮುಂದಿನ ವರ್ಷ ಫೆಬ್ರುವರಿಯಲ್ಲಿ ವಿಶ್ವ ಆಡಿಯೊ ವಿಶುವಲ್ ಎಂಟರ್‌ಟೈನ್‌ಮೆಂಟ್ ಸಮಾವೇಶವನ್ನು (ಡಬ್ಲ್ಯುಎವಿಇಎಸ್) ಆಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
'ಮನ್ ಕಿ ಬಾತ್' (ಮನದ ಮಾತು) ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದು ಸೃಜನಶೀಲ ಪ್ರತಿಭೆಗಳನ್ನು ಅನಾವರಣ ಮಾಡುವ ಜಾಗತಿಕ ವೇದಿಕೆಯಾಗಲಿದೆ ಎಂದು ಹೇಳಿದರು.
ಜಗತ್ತಿನಾದ್ಯಂತ ಇರುವ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳ ನಾಯಕರು ಮತ್ತು ಸೃಜನಶೀಲ ವ್ಯಕ್ತಿಗಳು ಫೆಬ್ರುವರಿ 5-9ರವರೆಗೆ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
2025ರ ಜನವರಿ 26ರಂದು ನಮ್ಮ ಸಂವಿಧಾನವು 75 ವರ್ಷಗಳನ್ನು ಪೂರೈಸುತ್ತಿದೆ ಇದರ ಸ್ಮರಣಾರ್ಥ constitution75.com ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು. ಹಾಗೇ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಆರಂಭವಾಗಲಿರುವ 'ಮಹಾ ಕುಭಮೇಳ'ವನ್ನು 'ಏಕತೆಯ ಮಹಾ ಕುಂಭ' ಎಂದು ನರೇಂದ್ರ ಮೋದಿ ಬಣ್ಣಿಸಿದರು.