ಮುಳ್ಳೇರಿಯ: ಅತಿಯಾದ ರಕ್ತಸ್ರಾವದಿಂದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮವ್ವಾರು ಸನಿಹದ ಮಲ್ಲಮೂಲೆ ನಿವಾಸಿ ಸಂತೋಷ್ ಎಂಬವರ ಪತ್ನಿ ಸುಮಿತ್ರಾ(35)ಮೃತಪಟ್ಟ ಮಹಿಳೆ. ಮಂಗಳವಾರ ಬೆಳಗ್ಗೆ ಇವರಿಗೆ ರಕ್ತಸ್ರಾವ ಕಂಡುಬಂದಿದ್ದು, ತಕ್ಷಣ ಇವರನ್ನು ಮುಳ್ಳೇರಿಯಾದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.