ವ್ಯಾಟಿಕನ್ ಸಿಟಿ: 'ಗಾಜಾದಲ್ಲಿ ಮಕ್ಕಳ ಮೇಲೆ ಇಸ್ರೇಲ್ ನಡೆಸಿರುವ ಬಾಂಬ್ ದಾಳಿ ಯುದ್ಧವಲ್ಲ, ಅದು ಕ್ರೌರ್ಯ' ಎಂದು ಪೋಪ್ ಫ್ರಾನ್ಸಿಸ್ ಶನಿವಾರ ಹೇಳಿದ್ದಾರೆ.
'ಶುಕ್ರವಾರದ ದಾಳಿಯು ನನ್ನ ಹೃದಯವನ್ನು ಗಾಸಿಗೊಳಿಸಿದೆ. ಆದ್ದರಿಂದ ಈ ಮಾತನ್ನು ನಾನು ಹೇಳುತ್ತಿರುವೆ' ಎಂದಿದ್ದಾರೆ.
ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಒಂದೇ ಕುಟುಂಬದ ಏಳು ಮಕ್ಕಳು ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಂಸ್ಥೆಯೊಂದು ತಿಳಿಸಿರುವುದಕ್ಕೆ ಪೋಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.