ಮಂಜೇಶ್ವರ : ಖ್ಯಾತ ಸಂಘಟಕ ನಿತಿನ್ ಕುಮಾರ್ ತೆಂಕಕಾರಂದೂರು ಅವರ ಕಥಾ ಸಂಯೋಜನೆಯಲ್ಲಿ ಗಡಿನಾಡಿನ ಯಕ್ಷಕವಿ ಯೋಗೀಶ ರಾವ್ ಚಿಗುರುಪಾದೆ ಪದ್ಯರಚಿಸಿರುವ ತುಲುನಾಡ ಸತ್ಯೊಲು ಕಾನದ ಕಟದೆರ್ ಪ್ರಸಂಗ ಬಿಡುಗಡೆ ಹಾಗೂ ಪ್ರದರ್ಶನ ಇತ್ತೀಚೆಗೆ ಬಂಟ್ವಾಳದ ಬಿ.ಸಿ. ರೋಡಿನ ಸ್ಪರ್ಶಕಲಾಮಂದಿರದಲ್ಲಿ ಜರಗಿತು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾಸಂಘದ ದಕ್ಷಿಣ ಜಿಲ್ಲಾ ಘಟಕ ಪ್ರದರ್ಶನ ಆಯೋಜಿಸಿದ್ದರು. ಸುಮಾರು ಎರಡುಸಾವಿರಕ್ಕೂ ಮಿಕ್ಕಿ ಪ್ರೇಕ್ಷಕರು ಸುಮಾರು ಹತ್ತುಗಂಟೆಗಳ ಕಾಲ ಪ್ರದರ್ಶನ ವೀಕ್ಷಿಸಿದರು. ಸಮಾರಂಭದಲ್ಲಿ ಪ್ರಸಂಗ ಕವಿ ಯೋಗೀಶ ರಾವ್ ಚಿಗುರುಪಾದೆ, ನಿತಿನ್ ಕುಮಾರ್ ತೆಂಕಕಾರಂದೂರು, ಭಾಗವತ ಚಂದ್ರಶೇಖರ ಕಕ್ಕೆಪದವು, ಗೋಪಾಲ್ ಧರ್ಮಸ್ಥಳ, ಕಲಾವಿದ ಕಿರಣ್ ಕೊಂಚಾಡಿ , ಮನೋಜ್ ವೇಣೂರು, ಉಪವಲಯ ಅರಣ್ಯಾಧಿಕಾರಿ ಕಮಲ ಉಜಿರೆ ಅವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು.