ಇಸ್ಲಾಮಾಬಾದ್ : ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬುಧವಾರ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಿರಾಶ್ರಿತರ ಸಚಿವ ಮತ್ತು ಇತರ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಒಳಗೆ ಸ್ಫೋಟ ಸಂಭವಿಸಿದ್ದು, ನಿರಾಶ್ರಿತರ ಸಚಿವ ಖಲೀಲ್ ಹಕ್ಕಾನಿ ಹತರಾಗಿದ್ದಾರೆ.
ಇವರು ತಾಲಿಬಾನ್ ಆಡಳಿತದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕನಾಗಿರುವ ಗೃಹ ಸಚಿವ ಸಿರಾಜುದ್ದೀನ್ ಹಕ್ಕಾನಿಯವರ ಚಿಕ್ಕಪ್ಪ.
ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಸದ್ಯಕ್ಕೆ ಹೊತ್ತುಕೊಂಡಿಲ್ಲ.