ಮುಳ್ಳೇರಿಯ: ಕಳೆದ ಐದಾರು ತಿಂಗಳಿಂದ ಮಲೆನಾಡು ಜನತೆಯನ್ನು ಕಾಡುತ್ತಿರುವ ಚಿರತೆ ಭೀತಿ ಮತ್ತಷ್ಟು ಹೆಚ್ಚಾಗತೊಡಗಿದೆ. ಮುಳ್ಳೇರಿಯ ಸನಿಹದ ಕರ್ಮಂತೋಡಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಡಿದೆ. ಟ್ಯೂಶನ್ ತರಗತಿ ಕಳೆದು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಚಿರತೆ ಕಾಣಿಸಿಕೊಂಡಿದ್ದರೆ, ಅಲ್ಲೇ ಸನಿಹದ ಪೇರಡ್ಕ ಪ್ರದೇಶದಲ್ಲಿ ಸ್ಕೂಟರಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿರತೆ ಕಾಣಿಸಿಕೊಂಡಿರುವುದಾಗಿ ಮಾಹಿತಿಯಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ನೀಡಿದ ಮಾಹಿತಿಯನ್ವಯ ಆರ್‍ಆರ್‍ಟಿ ತಂಡ ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದ್ದು, ಚಿರತೆ ಪತ್ತೆ ಸಾಧ್ಯವಾಗಿರಲಿಲ್ಲ. ಮುಳ್ಳೇರಿಯ, ಬೋವಿಕ್ಕಾನ ಸೇರಿದಂತೆ ವಿವಿಧೆಡೆ ಚಿರತೆ ಸಂಚಾರದ ವದಂತಿಯಿಂದ ಊರಿನ ಜನತೆ ಭೀತಿಯಿಂದ ಕಾಲಕಳೆಯಬೇಕಾಗಿದೆ ಜತೆಗೆ ಮಕ್ಕಳು ಶಾಲೆಗೆ ತೆರಳಲೂ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.