ಬದಿಯಡ್ಕ: ಭಜನಾಮಂದಿರವು ಸಮಾಜವನ್ನು ಒಂದುಗೂಡಿಸುವ ಕಾರ್ಯವನ್ನು ಮಾಡುವುದಲ್ಲದೆ ಜನರಲ್ಲಿ ಧಾರ್ಮಿಕ ಚಿಂತನೆಯ ಬೆಳಕನ್ನು ನೀಡುತ್ತದೆ. ನಿತ್ಯ ನಿರಂತರ ದೇವರ ನಾಮಸ್ಮರಣೆಯನ್ನು ಮಾಡುವುದರಿಂದ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತವಾಗುತ್ತದೆ. ಪ್ರತೀ ಮನೆಗಳೂ ದೇವರನ್ನು ಸ್ತುತಿಸುವ ಮಂದಿರಗಳಾಗಬೇಕು. ಅಯ್ಯಪ್ಪಸ್ವಾಮಿಯ ಆರಾಧನೆಯಿಂದ ಯುವಪೀಳಿಗೆಯಲ್ಲಿ ಧಾರ್ಮಿಕ ಚಿಂತನೆ, ಅರಿವು ಮೂಡುವಂತಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ನವೀಕರಣಗೊಂಡು ನೂತನವಾಗಿ ನಿರ್ಮಾಣಗೊಂಡ ವಿದ್ಯಾಗಿರಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠೆ ಮತ್ತು ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಶನಿವಾರ ನಡೆದ ಧಾರ್ಮಿಕ ಸಭೆ ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನವನ್ನು ನೀಡಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಮೇಗಿನಕಡಾರು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಸ್.ಭಾಸ್ಕರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮುಖ್ಯ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಪ್ರವೀಣ್ ಕುಮಾರ್ ಕೋಡೋತ್, ಇಂದಿನ ಕಾಲದಲ್ಲಿ ಎಲ್ಲರಿಗೂ ವಿದ್ಯೆಯಿರಬೇಕು. ವಿದ್ಯೆಯಿಂದ ವಿಜಯಿಯಾಗಿ ಧನ ಸಂಪಾದನೆ ಮಾತ್ರ ಇದ್ದರೆ ಸಾಲದು. ಸುಖ, ಆರೋಗ್ಯ, ಸೌಂದರ್ಯ, ಆಯುಸ್ಸು, ಕೌಟುಂಬಿಕ ಯಶಸ್ಸಿಗಾಗಿ ನಾವು ಜೀವಿಸುತ್ತೇವೆ ಎನ್ನುತ್ತಾ ಧಾರ್ಮಿಕ ಚಿಂತನೆಗಳ ಕುರಿತು ಅನೇಕ ವಿಚಾರಗಳನ್ನು ತಿಳಿಸಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜನಾಧಿಕಾರಿ ಮುಖೇಶ್ ಕುಮಾರ್, ಗುರುಸ್ವಾಮಿಗಳಾದ ರಮೇಶ್ ಆಳ್ವ ಕಡಾರು, ಕೃಷ್ಣ ಬದಿಯಡ್ಕ, ರಮೇಶ್ ನೀರ್ಚಾಲು, ಕುಂಞÂಕಣ್ಣ ಮಣಿಯಾಣಿ ಚುಕ್ಕಿನಡ್ಕ, ನಾರಾಯಣ ಮಜಿರ್ಪಳ್ಳ, ಜಗದೀಶ್ ಕಾರಡ್ಕ, ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ಮೇಗಿನ ಕಡಾರು, ಶುಭಲತಾ ರೈ ಕಡಾರು ಬೀಡು, ಸೇವಾಸಮಿತಿ ಅಧ್ಯಕ್ಷ ಪ್ರಭಾಕರ ರೈ ಮೇಗಿನಕಡಾರು, ಮಹಿಳಾಸಮಿತಿ ಅಧ್ಯಕ್ಷೆ ಪ್ರವೀಣ ಕುಮಾರಿ, ನಿವೃತ್ತ ಪ್ರಾಂಶುಪಾಲ ಡಾ. ಶಂಕರ ಪಾಟಾಳಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಶ್ಯಾಮ ಆಳ್ವ ಕಡಾರು ಬೀಡು ಸ್ವಾಗತಿಸಿ, ಚಂದ್ರಹಾಸನ್ ನಂಬ್ಯಾರ್ ಮುನಿಯೂರು ವಂದಿಸಿದರು. ರತ್ನಾಕರ ಎಸ್. ಓಡಂಗಲ್ಲು ನಿರೂಪಿಸಿದರು. ಸಂಜೆ ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಿಂದ ಪಾಲೆಕೊಂಬು ಮೆರವಣಿಗೆ ಕುಣಿತ ಭಜನೆಯೊಂದಿಗೆ ಹೊರಟು ಶ್ರೀಕ್ಷೇತ್ರ ತಲುಪಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾಗಸಂಗಮ ವಿದ್ಯಾಗಿರಿ ಇವರಿಂದ ಭಕ್ತಿಗಾನಸುಧೆ, ರಾತ್ರಿ ಚಿರಂಜೀವಿ ಯಕ್ಷಗಾನ ಕಲಾಸಂಘ ಕುಂಟಾಲುಮೂಲೆ ಇವರಿಂದ ಯಕ್ಷಗಾನ ಬಯಲಾಟ ಭಸ್ಮಾಸುರ ಮೋಹಿನಿ ಶಬರಿಮಲೆ ಅಯ್ಯಪ್ಪ ಪ್ರದರ್ಶನಗೊಂಡಿತು. ಮಹಾಪೂಜೆ, ಅಯ್ಯಪ್ಪನ್ ಪಾಟ್ಟ್, ಪೊಲಿಪ್ಪಾಟ್, ಪಾಲ್ ಕಿಂಡಿ ಸೇವೆ, ಅಗ್ನಿಸೇವೆ, ತಿರಿ ಉಯಿಚ್ಚಿಲ್, ಅಯ್ಯಪ್ಪ ವಾವರ ಯುದ್ಧ, ಶರಣಂ ವಿಳಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಶ್ರೀಕ್ಷೇತ್ರ ಧÀರ್ಮಸ್ಥಳದಿಂದ ವಿದ್ಯಾಗಿರಿ ಭಜನಾ ಮಂದಿರಕ್ಕೆ ಮಂಜೂರಾದ ಮೊತ್ತವನ್ನು ಮಂದಿರದ ಪದಾಧಿಕಾರಿಗಳಿಗೆ ಎಡನೀರು ಶ್ರೀಗಳು ಹಸ್ತಾಂತರಿಸಿದರು.