ಸಮರಸ ಚಿತ್ರಸುದ್ದಿ: ತಿರುವನಂತಪುರ: ಕುಂಬಳೆ ಸೀಮೆಯ ಪ್ರಧಾನ ನಾಲ್ಕು ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂದೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶದ ಲಾಂಛನವನ್ನು ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯ ಹಾಗೂ ನೋಂದಣಿ ಇಲಾಖೆ ಸಚಿವ ಕಡನಪ್ಪಳ್ಳಿ ರಾಮಚಂದ್ರನ್ ಅವರು ಗುರುವಾರ ಅವರ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು.
ದೇವಸ್ಥಾನ ಸಮಿತಿ ಉಪಾಧ್ಯಕ್ಷ ಗಿರೀಶ್ ಸಂಧ್ಯಾ ಜೊತೆಕಾರ್ಯದರ್ಶಿ ಮುರಳಿ ಗಟ್ಟಿ ಮತ್ತು ಟಿ.ಡಿ.ಮುರಳಿಕುಮಾರ್ ಬಂದಡ್ಕ ಉಪಸ್ಥಿತರಿದ್ದರು.