ಪೆರ್ಲ: ಕೇರಳ ಗ್ರಾಮೀಣ ಬ್ಯಾಂಕ್ ನ ಶೇಣಿ ಶಾಖೆಯನ್ನು ನೂತನ ಕಟ್ಟಡಕ್ಜೆ ವರ್ಗಾವಣೆಗೊಳಿಸಿ ಉದ್ಘಾಟನೆಗೊಳಿಸಲಾಯಿತು.
ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಬ್ಯಾಂಕ್ ಕಚೇರಿ ಉದ್ಘಾಟಿಸಿ ಮಾತನಾಡಿ, ನಾಡಿನ ಜನಪರ ಅಭಿವೃದ್ಧಿಯಲ್ಲಿ ಬ್ಯಾಂಕ್ ನ ಪಾತ್ರ ಮಹತ್ತರವಾದುದು.ಜನ ಸಾಮಾನ್ಯರ ಸೇವಾತತ್ಪರತೆ ಬ್ಯಾಂಕ್ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದರು. ಪ್ರಧಾನ ಪ್ರಬಂಧಕ ಚಿಂದಮ್ ರಮೇಶ್ ಅಧ್ಯಕ್ಷತೆವಹಿಸಿದ್ದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಬ್ಯಾಂಕ್ ಭದ್ರತಾ ಕೊಠಡಿ ಉದ್ಘಾಟಿಸಿದರು.
ನೂತನ ಕಚೇರಿಗೆ ಅಗತ್ಯವಾದ ಕಟ್ಟಡವನ್ನು ಒದಗಿಸಿದ ಸೂರ್ಯನಾರಾಯಣ ನಾಯಕ್ ಶೇಣಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿಸಲಾಯಿತು. ಎಣ್ಮಕಜೆ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಕೆ,ಶೇಣಿ ಶ್ರೀ ಶಾರದಾಂಬಾ ಎಯುಪಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ನೂತನ ವರ್ಷದ ಕನ್ನಡ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ವೀಣಾ ಎಸ್ ಪ್ರಾರ್ಥನೆ ಹಾಡಿದರು.ಕಾಸರಗೋಡು ವಲಯ ಪ್ರಬಂಧಕಿ ಶ್ರೀಲತಾ ವರ್ಮ ಸಿ ಸ್ವಾಗತಿಸಿ, ಶೇಣಿ ಶಾಖಾ ಪ್ರಬಂಧಕ ವಿಷ್ಣು ವಿನು ವಂದಿಸಿದರು.