ಮಧೂರು: ಪ್ರಸಿದ್ಧ ವಾದ ಶ್ರೀ ಮಧೂರು ದೇಗುಲದಲ್ಲಿ ಕಳೆದ 3ದಶಕಗಳಿಂದ ಶ್ರೀ ದೇವರ ಪ್ರಸಾದ ವಿತರಣೆ ಹಾಗೂ ಇನ್ನಿತರ ಕೆಲಸ ಕಾರ್ಯ ನಡೆಸಿ, ಸಏವೆಯಿಂದ ನಿವೃತ್ತರಾದ ಮುಟ್ಟತೋಡಿಯ ಪರಮೇಶ್ವರ ಅಡಿಗ ಅವರಿಗೆ ಇಂದು ದೇಗುಲದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭ ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ಟಿ ರಾಜೇಶ್ ಆವರು ಶ್ರೀ ಪರಮೇಶ್ವರ ದಂಪತಿಗೆ ಶಾಲು ಹೊದಿಸಿ, ಸ್ಮರಣಿಕೆ ಹಣ್ಣು ಹಂಪಲು ನೀಡಿ ಗೌರವಿಸಿದರು. ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಯ ಹಾಗೂ ಅವರ ಪತ್ನಿ ವಿಶೇಷ ಉಡುಗೊರೆ ನೀಡಿ ಹರಸಿದರು. ದೇಗುಲದ ಹಿರಿಯ ಅಧಿಕಾರಿ ಬಿ. ಎನ್ ಸುಬ್ರಹಣ್ಯ ಪರಿಚಯ ಭಾಷಣ ಮಾಡಿದರು. ದೇವಸ್ಥಾನದ ಪಿ.ಕೆ ಧನಂಜಯ ಕೃಷ್ಣಮೂರ್ತಿ ಕಲ್ಲುರಾಯ, ಕೃಷ್ಣಪ್ರಸಾದ್ ಅಡಿಗ ಮೊದಲದವರು ಉಪಸ್ಥಿತರಿದ್ದರು.