ಬದಿಯಡ್ಕ: ಅಂಬೇಡ್ಕರ್ ವಿಚಾರ ವೇದಿಕೆ (ರಿ.) ಬದಿಯಡ್ಕ ಇವರ ಆಶ್ರಯದಲ್ಲಿ ಶುಕ್ರವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮ ನಡೆಯಿತು.
ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತ ಬಾರಡ್ಕ ಅಂಬೇಡ್ಕರ್ ರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ನಾರಾಯಣ ಬಾರಡ್ಕ, ಸುಂದರ ಬಾರಡ್ಕ, ವಸಂತ ಬಾರಡ್ಕ, ಶ್ರೀಜಾ, ನಯನ, ಕಿರಣ, ಉಪಸ್ಥಿತರಿದ್ದರು.