ಕಾಸರಗೋಡು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾದಲ್ಲಿ ಮಾರ್ಚ್ 27 ರಿಂದ ಎಪ್ರಿಲ್ 7 ರ ವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಅಂಗವಾಗಿ ಮಾರ್ಚ್ ತಿಂಗಳಲ್ಲಿ ತಿರುವನಂತಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಹೊರಟು ಮಧೂರು ಶ್ರೀ ಕ್ಷೇತ್ರಕ್ಕೆ ತಲುಪಲಿರುವ ರಥ ಯಾತ್ರೆ ಯಶಸ್ವಿಗಾಗಿ ಪೂರ್ವಭಾವಿ ಸಭೆ ಮಧೂರು ದೇವಸ್ಥಾನದಲ್ಲಿ ಜರಗಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಿದರು. ದೇವಸ್ಥಾನದ ತಂತ್ರಿವರ್ಯರಾದ ದೇರೆಬೈಲು ಶಿವಪ್ರಸಾದ್ ತಂತ್ರಿ, ಶಿವಗಿರಿ ಮಠದ ಗಂಗಾತೀರ್ಥ ಸ್ವಾಮಿ ಆಶೀರ್ವಚನವಿತ್ತರು. ಶಿವಗಿರಿ ಮಠದ ಬಿಜು ದೇವರಾಜ್ ತಿರುವನಂತಪುರ ಉಪಸ್ಥಿತರಿದ್ದರು. ಡಾ,ಬಿ.ಎಸ್.ರಾವ್ ಸಭೆಯ ಅಧ್ಯಕ್ಷತೆ ವಹಿಸಿದರು. ಗಿರೀಶ್ ಸಂಧ್ಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದಾಧಿಕಾರಿಗಳಾದ ಮಂಜುನಾಥ ಕಾಮತ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಎಂ.ರಾಜೀವನ್ ನಂಬ್ಯಾರ್, ಕೆ.ನಾರಾಯಣಯ್ಯ, ಪ್ರಮೋದ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ.ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಪಿ.ಅನಂತರಾಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುರಳಿ ಗಟ್ಟಿ ವಂದಿಸಿದರು.
ಸಭೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ಗಿರೀಶ್ ಸಂಧ್ಯಾ, ಉಪಾಧ್ಯಕ್ಷರಾಗಿ ಮುರಳಿ ಗಟ್ಟಿ, ಸಂಚಾಲಕರಾಗಿ ನ್ಯಾಯವಾದಿ ಅನಂತರಾಮ, ಸಹಸಂಚಾಲಕರಾಗಿ ರಾಜೀವನ್ ನಂಬ್ಯಾರ್, ಸಂಯೋಜಕÀರಾಗಿ ಮುರಳಿ ಕುಮಾರ್ ಬಂದಡ್ಕ, ಉಡುಪಿ ಸಿ.ಐ ಪ್ರಮೋದ್ ಕುಮಾರ್ ಅವರನ್ನು ಆರಿಸಲಾಯಿತು.