ಮಂಜೇಶ್ವರ :ಕೇಂದ್ರ ಸರ್ಕಾರ ನೀಡುವ ಎಲ್ಲಾ ಯೋಜನೆಗಳನ್ನು, ಕೇರಳ ಸರ್ಕಾರ ಬುಡಮೇಲು ಮಾಡುತ್ತಿದೆ. ದೇಶದಲ್ಲಿ ಮೋದಿ ಸರ್ಕಾರ ಜಾರಿಗೆ ತಂದ ಪ್ರತಿ ಕುಟುಂಬಕ್ಕೆ 5ಲಕ್ಷ ರೂ ಗಳ ಅರೋಗ್ಯ ಯೋಜನೆ ಕೇರಳ ಹಾಗೂ ಬಂಗಾಳದಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಅನುಮತಿ ನೀಡಿಲ್ಲ. ಈಗ ಕೇಂದ್ರ ನೂತನವಾಗಿ ಜಾರಿಗೆ ತಂದ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಾರ್ಷಿಕ 5ಲಕ್ಷ ಅರೋಗ್ಯ ವಿಮಾ ಯೋಜನೆ ಅಯುಷ್ಮಾನ್ ವಯೋ ವಂದನ್ ಯೋಜನೆಯನ್ನು ಕೇರಳ ರಾಜ್ಯ ಸರ್ಕಾರ ಹಾಗೂ ಅರೋಗ್ಯ ಇಲಾಖೆ ಕೇರಳದಲ್ಲಿ ಜಾರಿ ಮಾಡದೇ ಬಡವರನ್ನು, ಅನಾರೋಗ್ಯ ಪೀಡಿತರನ್ನು ಬಹಿರಂಗವಾಗಿ ವಂಚಿಸುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಗಂಭೀರವಾಗಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದೆ.
ಕಳೆದ 1ತಿಂಗಳಿಂದ ರಾಜ್ಯದಲ್ಲಿ ಲಕ್ಷಾಂತರ ವೃದ್ಧರು, ಬಡವರು ಅಯುμÁ್ಮನ್ ನೋಂದಣಿ ಮಾಡಿಸಿದ್ದಾರೆ. ಇದನ್ನು ಕಂಡ ರಾಜ್ಯ ಸರ್ಕಾರ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿ ರಾಜ್ಯದಲ್ಲಿ ಆಯುಷ್ಮಾನ್ ಅಂಗಿಕಾರ ಸಾಧ್ಯವಿಲ್ಲ, ರಾಜ್ಯ ಅರೋಗ್ಯ ಇಲಾಖೆ ಕೇಂದ್ರ ಯೋಜನೆಗೆ ಸಹಕಾರ ನೀಡಲು ಸಾಧ್ಯವಿಲ್ಲ ಎಂಬ ಬೇಜವಾಬ್ದಾರಿತನ ಮೊಂಡುವಾದ ಬಡವರಿಗೆ ಮಾಡುವ ಅನ್ಯಾಯ ಮಾತ್ರವಲ್ಲ ಅಯುಷ್ಮಾನ್ ನೋಂದಣಿ ಮಾಡಿದವರನ್ನು ಬಿಪಿಎಲ್ ಕಾರುಣ್ಯ ಯೋಜನೆಯಿಂದ ಹೊರಗಿಟ್ಟು ಯಾವುದೇ ಸೌಲಭ್ಯ ಸಿಗದಂತೆ ಮಾಡಿ, ಯಾವುದೇ ಆಸ್ಪತ್ರೆಗಳಲ್ಲಿ, ಅನ್ಯ ರಾಜ್ಯಗಳಲ್ಲೂ ಕೇರಳದ ಜನರಿಗೆ ಸೌಲಭ್ಯ ಸಿಗದಂತೆ ತಾಂತ್ರಿಕ ನೆಪ ಹೇಳುತ್ತಿದೆ. ನೇರವಾಗಿ ರಾಜ್ಯ ಸರ್ಕಾರ ಬಡವರನ್ನು ವಂಚಿಸುತ್ತಿದೆ, ಮಾತ್ರವಲ್ಲ ಇದು ಅನ್ಯಾಯದ ಪರಮಾವಧಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿ ಖಂಡಿಸಿದರು.
ಸುಳ್ಳು ಪ್ರಚಾರ ಮೂಲಕ ನಯವಾಗಿ ಕೇರಳ ಸರ್ಕಾರ ಬಡವರಿಗೆ ಲಭಿಸಬೇಕಾದ ಸೌಲಭ್ಯಗಳನ್ನು ತಡೆ ಹಿಡಿಯುತ್ತಿದೆ. ಇದನ್ನು ಪ್ರಬುದ್ಧ ಕೇರಳದ ನಾಗರಿಕ ಸಮೂಹ ಒಗ್ಗಟಾಗಿ ಎದುರಿಸಬೇಕು. ಕೇಂದ್ರ ಯೋಜನೆಗಳನ್ನು ಕೇರಳದಲ್ಲಿಯೂ ಸಮಗ್ರ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಅದೇಶಿಸಬೇಕೆಂದು ಬಿಜೆಪಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ
ಬಿಜೆಪಿ ಮಂಡಲ ಸಭೆ ಮಿಯಪದವು ನಾಯಕ್ ನಿವಾಸದಲ್ಲಿ ಜರಗಿತು. ಜಿಲ್ಲಾ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಬಿಜೆಪಿ ಸಂಘಟನಾ ಪರ್ವ ಬಗ್ಗೆ ತರಗತಿ ನೀಡಿದರು.
ಮುಖಂಡರಾದ ಕೆವಿ ಭಟ್, ಸದಾಶಿವ ಚೇರಾಲು, ಯಾದವ ಬಡಾಜೆ, ತುಳಸಿಕುಮಾರಿ, ಪದ್ಮನಾಭ ರೈ, ಕೋಡಿ ಚಂದ್ರಶೇಖರ, ಪ್ರವೀಣಚಂದ್ರ ಬಲ್ಲಾಳ್, ಜನಪ್ರತಿನಿಧಿನಗಳು ನೇತಾರರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, .ಕೆ.ಚಂದ್ರಹಾಸ ಪೂಜಾರಿ ವಂದಿಸಿದರು.