ಉಪ್ಪಳ: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲೆಯ ಸೇವಾ ವಿಭಾಗದ ನೇತೃತ್ವದಲ್ಲಿ `ವಕ್ಫ್ ಬೋರ್ಡ್' ಬಗೆಗಿನ ವಿಶೇಷ ತಿಳುವಳಿಕಾ ಜಾಗೃತಿ ಶಿಬಿರವು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಿತು.
ವಿಹಿಂಪ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹಕಾರ ಭಾರತಿ ಕೇರಳ ರಾಜ್ಯಾಧ್ಯಕ್ಷ ಕರುಣಾಕರ ನಂಬಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯುವ ವಾಗ್ಮಿ ಲತೇಶ್ ಬಾಕ್ರಬೈಲು ವಕ್ಫ್ ಬೋರ್ಡ್ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ಅರಿವು ಮೂಡಿಸಿದರು. ಯಾದವ ಕೀರ್ತೇಶ್ವರ ಸ್ವಾಗತಿಸಿ, ಪದ್ಮಾ ಮೋಹನ್ ದಾಸ್ ವಂದಿಸಿದರು. ಕೊಂಡೆವೂರು ಶ್ರೀಗಳ ಘನ ಉಪಸ್ಥಿತಿ ಮತ್ತು ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ರಘು ಭಟ್ ಬಂದ್ಯೋಡ್ ಕಾರ್ಯಕ್ರಮ ನಿರೂಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಮತ್ತು ಕಾರ್ಯಕರ್ತರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.