ಕಾಸರಗೋಡು: ದೇಶಕ್ಕಾಗಿ ಜೀವನ ಮುಡಿಪಾಗಿಟ್ಟು, ಪ್ರಾಣತೆತ್ತ ಹಾಗೂ ಅಂಗವಿಕಲರಾದ ವೀರ ಯೋಧರ ತ್ಯಾಗಮಯ ಜೀವನ ನಮಗೆಲ್ಲರಿಗೂ ಮಾದರಿಯಾಗಿರುವುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಅವರು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಧ್ವಜ ಸ್ವೀಕರಿಸಿ ಜಿಲ್ಲಾ ಮಟ್ಟದ ನಿಧಿ ಸಂಗ್ರಹ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲಾಧಿಖಾರಿ ಕೆ. ಇನ್ಬಾಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜಸ್ಥಾನ ಸಿಕಾರ್ ಸಿಟಿ ಎಎಸ್‍ಪಿಸಿ ಶಾಹೀನ್ ವಿಶೇಷ ಅತಿಥಿಯಾಗಿದ್ದರು. ಹೆಚ್ಚುವರಿ ಜಿಲ್ಲ ದಂಡಾಧಿಕಾರಿಪಿ. ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ, ಸೈನಿಕ ಕಲ್ಯಾಣ ಮಂಡಳಿ ನಿ. ಬ್ರಿಗೇಡಿಯರ್ ಟಿ.ಸಿ.ಅಬ್ರಹಾಂ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಂದೇಶ ನೀಡಿದರು. ಖಣ. ಸ್ಕ್ವಾಡ್ ಲೀಡರ್ ಕೆ. ನಾರಾಯಣನ್ ನಾಯರ್, ಜಿಲ್ಲಾ ಸೇನಾ ಮಂಡಳಿ ಸದಸ್ಯ ರಿ. ಗೌರವ ಕ್ಯಾಪ್ಟನ್ ಮೋಹನನ್ ನಾಯರ್,ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಮಾಜಿ ಸೈನಿಕರ ಸಂಘಟನೆಯ ಪ್ರತಿನಿಧಿಗಳಾದ ಪಿ. ರಾಜೀವನ್, ಕೆ.ಪಿ.ರಾಜನ್ ಮೊದಲಾದವರು ಉಪಸ್ಥಿತರಿದ್ದರು.
ಸಂದರ್ಭ ನಡೆದ ವಿಚಾರ ಸಂಕಿರಣದಲ್ಲಿ ಸೈನಿಕ ಕಲ್ಯಾಣ ಕಚೇರಿಯ ಎ.ವಿ.ಬಾಬು ಜಾಗೃತಿ ವಿಚಾರ ಮಂಡಿಸಿದರು. ಸಿವಿಲ್ ಸ್ಟೇಶನ್ ವಠಾರದ ವೀರಯೋಧರ ಸ್ಮಾರಕಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಮಾಜಿ ಸೈನಿಕರು, ಕುಟುಂಬದವರು, ಎನ್ ಸಿಸಿ ಕೆಡೆಟ್ ಗಳು, ಕಲೆಕ್ಟರೇಟ್ ನೌಕರರು ಪಾಲ್ಗೊಂಡಿದ್ದರು.