ಕುಂಬಳೆ: ಬಂದ್ಯೋಡಿನಲ್ಲಿ ಸಪ್ಲೈಕೋ ಸೂಪರ್ ಮಾರ್ಕೆಟನ್ನು ರಾಜ್ಯಲೀಗಲ್ ಮೆಟ್ರೋಲಜಿ ಖಾತೆ ಸಚಿವ ಜಿ.ಆರ್.ಅನಿಲ್ ಉದ್ಘಾಟಿಸಿದರು. ಕ್ರಿಸ್‍ಮಸ್ ಹಾಗು ಹೊಸ ವರ್ಷದ ಅಂಗವಾಗಿ ರಾಜ್ಯ ವ್ಯಾಪಕವಾಗಿ ವಿಶೇಷ ಸಂತೆಗಳನ್ನು ತೆರೆಯುವುದಾಗಿ ಸಚಿವರು ತಿಳಿಸಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತಿಮತ್ ರುಬೀನ ಪ್ರಥಮ ಮಾರಾಟ ನಡೆಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಅಶೋಕನ್, ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯರಾದ ರಶೀದ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಹಾರೀಸ್ ಪೈವಳಿಕೆ, ರಾಮಕೃಷ್ಣ ಕಡಂಬಾರು, ಡಿ.ಎಂ.ಕೆ.ಮುಹಮ್ಮದ್, ಟಿ.ಎ.ಮೂಸಾ, ಸುನಿಲ್ ಅನಂತಪುರ, ತಾಜುದ್ದೀನ್ ಮೊಗ್ರಾಲ್, ಮಹಮೂದ್ ಕೈಕಂಬ, ರಾಘವ ಚೇರಾಲ್, ಅಹಮ್ಮದಲಿ ಕುಂಬಳೆ, ಪ್ರಿಜು ಕೆ.ಬೆಳ್ಳೂರು, ಮನೋಜ್ ಮಂಜೇಶ್ವರ, ಸಿದ್ದಿಕ್ ಕೊಡ್ಯಮೆ, ಜೇಮ್ಸ್ ಕನ್ನಿಪಳ್ಳಿ. ಟಿ.ಕೆ.ಕುಂಞõÁಮು, ನ್ಯಾಶನಲ್ ಅಬ್ದುಲ್ಲ ಮೊದಲಾದವರು ಮಾತನಾಡಿದರು.