ಕಾಸರಗೋಡು: ಜೆಸಿಐ ಕಾಸರಗೋಡಿನ 2025ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ. 13ರಂದು ಸಂಜೆ 7ಕ್ಕೆ ಕಾಸರಗೋಡು ನಗರ ಸಭಾಂಗಣದಲ್ಲಿ ನಡೆಯಲಿದೆ. ಶಾಸಕಇ. ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜೆಸಿಐ ಕಾಸರಗೋಡು ಘಟಕ ಅಧ್ಯಕ್ಷ ಕೆ.ಎಂ.ಮೊಯಿನುದ್ದೀನ್ ಅಧ್ಯಕ್ಷತೆ ವಹಿಸುವರು. ಜೆಸಿಐ ಪ್ರಾದೇಶಿಕ ಅಧ್ಯಕ್ಷ ಜಸಿಲ್ ಜಯನ್ ಅತಿಥಿಗಳಾಗಿ ಭಾಗವಹಿಸುವರು. ಜೆಸಿಐ ರಾಷ್ಟ್ರೀಯ ತರಬೇತುದಾರ ರಾಜೇಶ ಕೂಟಕಣಿ ಆಶಯ ಭಾಷಣ ಮಾಡುವರು. ಸಿನಿಮಾ ತಾರೆ ಅಪರ್ಣಾಹರಿ, ಜೇಸಿಐ ವಲಯ ಉಪಾಧ್ಯಕ್ಷ ಮಹಮ್ಮದ್ ಜೆಬ್ರೂದ್, ಅಧ್ಯಕ್ಷ ಮಿಥುನ್ ಗುರಿಕಳ್‍ವಳಪಿಲ್, ವಲಯ ಅಧಿಕಾರಿ ಯತೀಶ್ ಬಲ್ಲಾಳ್, ಕಾರ್ಯಕ್ರಮ ಸಂಚಾಲಕ ರಮಸಾದ್ ಅಬ್ದುಲ್ಲಾ, ಕಾರ್ಯದರ್ಶಿ ಮೊಹಮ್ಮದ್ ಮಕ್ಸೂಸ್ ಪಾಲ್ಗೊಳ್ಳುವರು.
ಈ ಸಂದರ್ಭ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯುವುದು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಏವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಮುಖ ಕಾರ್ಯಕ್ರಮದ ಲೋಗೋಬುಲೆಟಿನ್ ಬಿಡುಗಡೆ, ಕಲಾ ಪ್ರದರ್ಶನ ನಡೆಯಲಿದೆ.