ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಸಾಂಸ್ಕøತಿಕ ಸಮಾರಂಭಗಳೊಂದಿಗೆ ಶನಿವಾರ ಮತ್ತು ಭಾನುವಾರ ಎರಡು ದಿನಗಳಲ್ಲಿ ಸಂಪನ್ನಗೊಂಡಿತು.
ಪ್ರಥಮ ದಿನ ಅಭಿಷೇಕ ಪೂಜೆ, ಉಷಃಪೂಜೆ, ಗಣಹೋಮ, ಕಲಶಪೂಜೆ, ಶ್ರೀ ದೇವರಿಗೆ ನವಕಾಭಿಷೇಕ, ಭಕ್ತರಿಂದ ತುಲಾಭಾರ ಸೇವೆ, ವಿಧಾತ್ರಿ ಭಟ್ ಅಬ್ರಾಜೆ ಬಳಗದವರಿಂದ ಸಂಗೀತಾರ್ಚನೆ ಜರಗಿತು. ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ನಡೆಯಿತು.
ರಾತ್ರಿ ಶ್ರೀ ಭೂತಬಲಿ, ಶ್ರೀ ಪದ್ಮನಾಭ ಮನೋಳಿತ್ತಾಯ ಮತ್ತು ಬಳಗದವರಿಂದ ವೇದಮಂತ್ರ ಪಠಣ, ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ಗುರುಗಳಾದ ಉμÁ ಈಶ್ವರ ಭಟ್ ಮತ್ತು ಶಿಷ್ಯರಿಂದ ಸಂಗೀತ ಸೇವೆ, ರಾಜಾಂಗಣದಲ್ಲಿ ನೃತ್ಯಸೇವೆ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರಿಗಿ ಬಂದ ಬಳಿಕ ಕಟ್ಟೆಪೂಜೆ ಜರಗಿದವು. ಉತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ ಸೇವೆ ಜರಗಿತು.
ದ್ವಿತೀಯ ದಿನ ಬೆಳಗ್ಗೆ ಅಬಿಷೇಕ ಪೂಜೆ, ಉಷಃಪೂಜೆ , ಶಿವೇಲಿ, ರಾಜಾಂಗಣದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಹಾ ಪೂಜೆ, ಮಂತ್ರಾಕ್ಷತೆ ಮತ್ತು ಪ್ರಸಾದ ಭೋಜನ ಜರಗಿದವು. ಮಧ್ಯಾಹ್ನ ವಿಷ್ಣುಮೂರ್ತಿ ದೈವದ ಕೋಲ ಜರಗಿ ದೈವಾರಾಧನೆ ಸಂಪನ್ನವಾಯಿತು. ಗಿರೀಶ ಅಡಿಗ ಕರಿಚೇರಿ, ಮುರಳಿ ಅಡಿಗ ಕೂಡ್ಲು ಅವರಿಂದ ದೇವರ ನೃತ್ಯಸೇವೆ, ದರ್ಶನಬಲಿ ಜರಗಿದವು. ರಾತ್ರಿ ಶ್ರೀರಂಗಪೂಜೆ ನೆರವೇರಿತು. ಕ್ಷೇತ್ರ ಪ್ರಬಂಧಕ ಯನ್. ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು. ಶ್ರೀ ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಮಯ್ಯ ವೈದಿಕ ವಿಭಾಗ ಕಾರ್ಯ ನಿರ್ವಹಣೆಯಲ್ಲಿ ಸಹಕರಿಸಿದರು.