ಮುಂಬೈ: ಆರ್‌ಟಿಜಿಎಸ್ ಅಥವಾ ಎನ್‌ಇಎಫ್‌ಟಿ ಮೂಲಕ ಯಾವ ಬ್ಯಾಂಕ್ ಖಾತೆಗೆ ಹಣ ಪಾವತಿ ಮಾಡುತ್ತೇವೆಯೊ ಆ ಬ್ಯಾಂಕ್ ಖಾತೆಯ ಹೆಸರನ್ನು ಪರಿಶೀಲಿಸಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆಯೊಂದನ್ನು ರೂಪಿಸುವಂತೆ ರಾಷ್ಟ್ರೀಯ ಪಾವತಿ ನಿಗಮಕ್ಕೆ ಆರ್‌ಬಿಐ ಸೋಮವಾರ ಸೂಚನೆ ನೀಡಿದೆ.
'2025ರ ಏಪ್ರಿಲ್ 1ರ ಒಳಗೆ ಈ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಯುಪಿಐ ಮತ್ತು ಐಎಂಪಿಎಸ್ ಮೂಲಕ ಹಣ ಕಳುಹಿಸುವಾಗ ಯಾರಿಗೆ ಪಾವತಿ ಮಾಡುತ್ತೇವೆಯೊ ಅವರ ಹೆಸರನ್ನು ಮರುಪರಿಶೀಲಿಸಿಕೊಳ್ಳುವ ವ್ಯವಸ್ಥೆ ಇದೆ. ಇಂಥದ್ದೆ ವ್ಯವಸ್ಥೆ ರೂಪಿಸಿ. ಇದರಿಂದ ಯಾವುದೋ ಖಾತೆ ಹಣ ವರ್ಗಾವಣೆಯಾಗುವುದನ್ನು ತಡೆಯಬಹುದು' ಎಂದು ಆರ್‌ಬಿಐ ಹೇಳಿದೆ.