ರಾಯ್‌ಪುರ: ಛತ್ತೀಸಗಢದ ತಿಮ್ಮಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯನ್ನು ಮಾವೋವಾದಿಗಳು ಶುಕ್ರವಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ 'ಎಎನ್‌ಐ' ಸುದ್ದಿಸಂಸ್ಥೆ ವರದಿ ಮಾಡಿದೆ.
ಡಿಸೆಂಬರ್ 6ರ ರಾತ್ರಿ ಕೊಲೆ ನಡೆದಿದ್ದು, ಗ್ರಾಮದ ಎದುರು ಮಹಿಳೆಯ ಶವ ಪತ್ತೆಯಾಗಿದೆ.
ನಿಷೇಧಿತ ಸಂಘಟನೆಯಾಗಿರುವ ಸಿಪಿಐಎಂ ಮಡಾಯಿ ಪ್ರದೇಶ ಸಮಿತಿಯು ಕರಪತ್ರವು ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಬಿಜಾಪುರ ಪೊಲೀಸರು ತಿಳಿಸಿದ್ದಾರೆ.
ಮಹಿಳೆಯು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂಬುದಾಗಿ ಕರಪತ್ರದಲ್ಲಿ ಆರೋಪಿಸಲಾಗಿದೆ. ಸದ್ಯ ಶವವನ್ನು ವಶಕ್ಕೆ ಪಡೆದಿದ್ದೇವೆ. ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.