ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಮುಖ್ಯಸ್ಥರಾಗಿ Sanjay Malhotra ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರವು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ಮುಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಿಸಿದೆ.
ಮಲ್ಹೋತ್ರಾ, 1990 ರ ಬ್ಯಾಚ್ ರಾಜಸ್ಥಾನ ಕೇಡರ್ IAS ಅಧಿಕಾರಿಯಾಗಿದ್ದು, ಹಾಲಿ ಮುಖ್ಯಸ್ಥ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿಯು ಮಂಗಳವಾರ (ಡಿಸೆಂಬರ್ 10, 2024) ಕೊನೆಗೊಳ್ಳಲಿದೆ. ಹೀಗಾಗಿ ಮಲ್ಹೋತ್ರಾ ಅವರನ್ನು 26ನೇ ಆರ್‌ಬಿಐ ಗವರ್ನರ್ ಆಗಿ ಆಯ್ಕೆ ಮಾಡಲಾಗಿದೆ.
ಆರ್‌ಬಿಐ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರ ಡಿಸೆಂಬರ್ 9ರಂದು ಸೋಮವಾರ ಆದೇಶ ಹೊರಡಿಸಿದೆ. ಹಾಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಜಾಗಕ್ಕೆ ಮಲ್ಹೋತ್ರಾ ನೇಮಕಗೊಂಡಿದ್ದಾರೆ.