ಕಾಸರಗೋಡು: ಪರಿಶಿಷ್ಟ ವರ್ಗದ ಜನತೆಗಾಗಿ ಆಯೋಜಿಸಿರುವ ಮಾಧ್ಯಮ ಕಾರ್ಯಾಗಾರ ಮಾಧ್ಯಮ ಕ್ಷೇತ್ರ ಮತ್ತು ಉದ್ಯೋಗ ಅವಕಾಶಗಳನ್ನು ಪರಿಚಯಿಸಲಿರುವ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾಹಿತಿ ಕಛೇರಿ ಹಾಗೂ ಕಾಸರಗೋಡು ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸಿವಿಲ್ ಸ್ಟೇಶನ್ ಜಿಲ್ಲಾ ಮಾಹಿತಿ ಕಚೇರಿಯ ಪಿ.ಆರ್ ಚೇಂಬರ್‍ನಲ್ಲಿ ನಡೆದ ಪರಿಶಿಷ್ಟ ವರ್ಗದದವರಿಗಾಗಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಪರಿಶಿಷ್ಟ ವರ್ಗ ಅಭಿವೃದ್ಧಿ ಅಧಿಕಾರಿ ಮೋಹನ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯೋಜನಾಧಿಕಾರಿ ಟಿ. ರಾಜೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಕೆ.ವಿ.ರವಿರಾಜ್, ಎ.ಟಿ.ಡಿ.ಒ ಕೆ.ವಿ.ರಾಘವನ್ ಉಪಸ್ಥಿತರಿದ್ದರು. ಮಾತೃಭೂಮಿ ಬ್ಯೂರೋ ಮುಖ್ಯಸ್ಥ ವಿ.ಯು.ಮಾತುಕುಟ್ಟಿ, ದೇಶಾಭಿಮಾನಿ ಬ್ಯೂರೋ ಮುಖ್ಯಸ್ಥ ವಿನೋದ್ ಪಾಯಂ ತರಗತಿ ನಡೆಸಿದರು. ಮಾಧ್ಯಮ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಪರಿಶಿಷ್ಟ ವರ್ಗದವರು ಭಾಗವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಸಹಾಯಕ ಮಾಹಿತಿ ಅಧಿಕಾರಿ ಎ.ಪಿ.ದಿಲ್ನಾ ವಂದಿಸಿದರು.