ತಿರುವನಂತಪುರಂ: ಕೇರಳ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಕೆ-ಸೊಟೊ) ಮರಣೋತ್ತರ ಅಂಗಾಂಗ ದಾನವನ್ನು ಉತ್ತೇಜಿಸಲು ಮತ್ತು ರಾಜ್ಯದಲ್ಲಿ ಅಂಗಾಂಗ ದಾನದ ಸಂದೇಶವನ್ನು ಹರಡಲು ಯೋಜನೆ ಅನುಸ್ಠಾನಗೊಳಿಸಲಿದೆ.
ಸಂಸ್ಥೆ (ಕೆ-ಸೋಟೊ) ಮೃತ ಸಂಜೀವನಿ ಡಿಸೆಂಬರ್ 1(ಇಂದು) ರಂದು 'ಜೀನೇಕಂ ಜೀವನಕಂ' ಎಂಬ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಲಿದೆ. ‘ಜೀವನಕಂ ಜೀವನ’ ಎಂಬ ಸಂದೇಶವಿರುವ ಫಲಕಗಳನ್ನು ಹಿಡಿದು ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು.
ನಂತರ ಆರೋಗ್ಯ ಸಚಿವರು ಅಂಗಾಂಗ ದಾನ ಜಾಗೃತಿ ಸಂದೇಶ ನೀಡಲಿದ್ದಾರೆ. ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಕೆ-ಸೊಟೊ ಸಿದ್ಧಪಡಿಸಿರುವ ವಿಡಿಯೋವನ್ನ ಪ್ರದರ್ಶಿಸಲಾಗುವುದು.
ಅಂಗಾಂಗ ದಾನದ ಹಿರಿಮೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ, ಈ ಜಗತ್ತಿನಲ್ಲಿ ಇರುವ ಅನಾರೋಗ್ಯಕರ ಪ್ರವೃತ್ತಿಯನ್ನು ಬಯಲಿಗೆಳೆಯುವ, ಅನುಮಾನಗಳನ್ನು ದೂರ ಮಾಡುವ, ತಜ್ಞರ ಅಭಿಪ್ರಾಯ ಮತ್ತು ಸಂದೇಶಗಳನ್ನು ಎಲ್ಲರಿಗೂ ತಲುಪಿಸುವ ಹಾಗೂ ಅಂಗಾಂಗ ದಾನಕ್ಕೆ ಸಾರ್ವಜನಿಕರು ಮುಂದಾಗುವಂತೆ ಮಾಡುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಂದು ಡಿಸೆಂಬರ್ 1 ರಿಂದ ಮೇ 31, 2025 ರವರೆಗೆ ಆರು ತಿಂಗಳ ಸಾಮಾಜಿಕ ಮಾಧ್ಯಮ ಅಭಿಯಾನದ ಭಾಗವಾಗಿ, K-Soto ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಿದೆ.