ಬದಿಯಡ್ಕ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಅಂಬೇಡ್ಕರ್‍ನ್ನು ಅವಹೇಳನಕಾರಿಯಾಗಿ ಮಾತನಾಡಿರುವುದು ಹಾಗೂ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಕೇಸನ್ನು ದಾಖಲಿಸಿರುವುದರ ವಿರುದ್ಧ ಕಾರಡ್ಕ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಶುಕ್ರವಾರ ಸಂಜೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋಪ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಆನಂದ ಕೆ. ಮವ್ವಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಹಾಸ ರೈ, ಜಗನ್ನಾಥ ರೈ, ಶ್ಯಾಮಪ್ರಸಾದ್ ಮಾನ್ಯ, ಜೋನಿ ಕ್ರಾಸ್ತ, ಶ್ರೀಧರ ನಾಯರ್ ಆಯರ್ಕಾಡ್, ಖಾದರ್ ಮಾನ್ಯ, ಎಸ್.ಕೆ.ಗೋಪಾಲ, ಗಂಗಾಧರ ಗೋಳಿಯಡ್ಕ, ಕರುಣಾಕರನ್ ನಂಬ್ಯಾರ್, ರಾಮಪಟ್ಟಾಜೆ, ಕೃಷ್ಣದಾಸ್ ತಿರುಪತಿ ಭಟ್, ಚಂದ್ರಹಾಸ ಭಟ್, ಅಶ್ರಫ್ ಚೆರೂಣಿ, ಶರೀಫ್ ಪುತ್ರಕಳ, ಶ್ರೀನಾಥ್, ಮುಂತಾದವರು ನೇತೃತ್ವ ನೀಡಿದರು. ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆಯನ್ನು ವ್ಯಕ್ತಪಡಿಸಲಾಯಿತು.