ಸೋಲ್: ದಕ್ಷಿಣ ಕೊರಿಯಾದ ನ್ಯಾಷನಲ್ ಅಸೆಂಬ್ಲಿಯು (ಸಂಸತ್) ಹಂಗಾಮಿ ಅಧ್ಯಕ್ಷ ಹಂಗಾಮಿ ಅಧ್ಯಕ್ಷ ಹಾನ್ ಡಕ್-ಸೂ ಅವರಿಗೆ ವಾರ್ಗಂಡನೆ ವಿಧಿಸುವ ನಿರ್ಣಯವನ್ನು ಶುಕ್ರವಾರ ಅಂಗೀಕರಿಸಿದೆ. ಇದರಿಂದ ದೇಶದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿದೆ.
ಆಡಳಿತ ಪಕ್ಷಗಳ ತೀವ್ರ ವಿರೋಧದ ನಡುವೆಯೇ ವಾಗ್ದಂಡನೆ ನಿರ್ಣಯವನ್ನು 192-0 ಮತಗಳಿಂದ ಅಂಗೀಕರಿಸಲಾಯಿತು. ವಾಗ್ಡಂಡನೆ ನಿರ್ಣಯವನ್ನು ವಿರೋಧಿಸಿದ ಆಡಳಿತ ಪಕ್ಷದ ಸದಸ್ಯರು ಮತದಾನದಿಂದ ದೂರವುಳಿದರು.
ವಾಗ್ದಂಡನೆ ನಿರ್ಣಯ ಅಂಗೀಕರಿಸಿರುವ ಕಾರಣ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೇ ಅಥವಾ ಮುಂದುವರಿಸಬೇಕೇ ಎಂಬುದನ್ನು ದೇಶದ ಸಾಂವಿಧಾನಿಕ ನ್ಯಾಯಾಲಯವು ನಿರ್ಧರಿಸಲಿದೆ. ಅದುವರೆಗೂ ಅವರು ಅಧ್ಯಕ್ಷರ ಯಾವುದೇ ಅಧಿಕಾರವನ್ನು ಅನುಭವಿಸುವಂತಿಲ್ಲ.
ದೇಶದಲ್ಲಿ ಸೇನಾಡಳಿತ ಹೇರಿದ್ದ ಯೂನ್ ಸುಕ್ ಯೋಲ್ ಅವರಿಗೆ ವಾಗ್ದಂಡನೆ ವಿಧಿಸಿ, ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ ಬಳಿಕ ಹಾನ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.