HEALTH TIPS

ವಿಶ್ವಾಸಮತ ಸೋತ ಫ್ರಾನ್ಸ್ ಪ್ರಧಾನಿ ಮೈಕೆಲ್ ಬರ್ನಿಯರ್; ರಾಜೀನಾಮೆ ಸಾಧ್ಯತೆ

ಪ್ರಾನ್ಸ್: ಪ್ರಧಾನಿ ಮೈಕೆಲ್ ಬರ್ನಿಯರ್‌ ಮತ್ತು ಅವರ ಕ್ಯಾಬಿನೆಟ್‌ ವಿರುದ್ಧ ಫ್ರಾನ್ಸ್‌ ಸಂಸದರು ಬುಧವಾರ ಅವಿಶ್ವಾಸಮತ ಅಂಗೀಕರಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ ಹೊಸ ರಾಜಕೀಯ ಸಂದಿಗ್ಧತೆ ಸೃಷ್ಟಿಯಾಗಿದೆ.

ಫ್ರಾನ್ಸ್‌ ಸಂಸತ್ತಿನ ಕೆಳಮನೆಯಲ್ಲಿ 331 ಸಂಸದರು ಅವಿಶ್ವಾಸಮತ ನಿರ್ಣಯದ ಪರ ಮತ ಚಲಾಯಿಸಿದ್ದಾರೆ.

ಈ ನಿರ್ಣಯ ಅಂಗೀಕಾರಗೊಳ್ಳಲು ಕನಿಷ್ಠ 288 ಮತಗಳ ಅಗತ್ಯವಿದೆ. ಇದರಿಂದಾಗಿ, ಅಧಿಕಾರಕ್ಕೇರಿದ ಮೂರೇ ತಿಂಗಳಲ್ಲಿ ಬರ್ನಿಯರ್ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಸಾಲದ ಹೊರೆಯಿಂದ ಕಂಗೆಟ್ಟಿರುವ ಫ್ರಾನ್ಸ್‌, ಸ್ಥಿರ ಬೆಳವಣಿಗೆ ಸಾಧಿಸಲು ಶ್ರಮಿಸುತ್ತಿರುವ ಹೊತ್ತಿನಲ್ಲೇ ಸರ್ಕಾರ ಪತನಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದಾಗ್ಯೂ, ಎಮ್ಯಾನುವೆಲ್‌ ಮ್ಯಾಕ್ರನ್‌ ಅವರು ಅಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ. ಆದರೆ, ಅವರಿಗೂ ಬೆಂಬಲ ಅಸ್ಥಿರವಾಗಿದೆ.

ಮ್ಯಾಕ್ರನ್‌ ನೂತನ ಪ್ರಧಾನಿಯನ್ನು ಹೆಸರಿಸುವವರೆಗೆ ಬರ್ನಿಯರ್‌ ಅವರೇ ಉಸ್ತುವಾರಿಯಾಗಿರಲಿದ್ದಾರೆ.

ಫ್ರಾನ್ಸ್ ಸಂಸತ್ತಿಗೆ ಇದೇ ವರ್ಷ ಜುಲೈನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರಕಿರಲಿಲ್ಲ. ಇದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಮಹಾಯುದ್ಧದ ಬಳಿಕ ಫ್ರಾನ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಸ್ಥಿತಿ ಎದುರಾಗಿದೆ.

ಬರ್ನಿಯರ್‌ಗೂ ಮುನ್ನ ಪ್ರಧಾನಿಯಾಗಿದ್ದ ಗೇಬ್ರಿಯಲ್ ಅಟ್ಟಲ್, 2024ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಅಧಿಕಾರದಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries