ಕಾಸರಗೋಡು: ನಗರದ ಚಂದ್ರಗಿರಿ ಸೇತುವೆಯಿಂದ ವ್ಯಕ್ತಿಯೊಬ್ಬರು ಹೊಳಗೆ ಹಾರಿದರೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಪೆÇಲೀಸರು ಹುಡುಕಾಟ ಆರಂಭಿಸಿದ್ದಾರೆ. ಶುಕ್ರವಾರ ಸಂಜೆ ಜನರು ನೋಡುತ್ತಿದ್ದಂತೆ ವ್ಯಕ್ತಿಯೊಬ್ಬ ಧಾವಿಸಿ ಬಂದು ಚಂದ್ರಗಿರಿ ಸೇತುವೆಯನ್ನೇರಿ ಹೊಳೆಗೆ ಧುಮುಕಿರುವುದಾಘಿ ದಊರದಿಂದ ಕಂಡವರು ತಿಳಿಸಿದ್ದಾರೆ. ಸನಿಹ ತೆರಳಿ ನೋಡಿದಾಗ ರಸ್ತೆ ಅಂಚಿಗೆ ಒಂದು ಬೈಕ್, ಅದರ ಕೀಲಿಕೈ, ಪರ್ಸ್, ಚಪ್ಪಲಿ ಎಂಬಿವು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿ ಹೊಳೆಗೆ ಧುಮುಕಿರುವುದನ್ನು ಖಚಿತಪಡಿಸಿ, ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಆಗಮಿಸಿ ಹುಡುಕಾಟ ಆರಂಭಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ರಸ್ತೆಯಲ್ಲಿ ನೂರಾರು ಮಂದಿ ಜಮಾಯಿಸಿದ್ದು, ವಾಹನ ಸಂಚಾರಕ್ಕೂ ಅಲ್ಪ ಕಾಲ ಅಡಚಣೆಯುಂಟಾಗಿತ್ತು.