ಕಾಸರಗೋಡು: ತಮಿಳಿನಾಡು ಚಂಡಮಾರುತ ಪ್ರಭಾವ ಕೇರಳ ಕರಾವಳಿಗೂ ಅಪ್ಪಳಿಸಿದ್ದು,ಕೇರಳದಾತ್ಯಂತ ಭಾರೀ ಮಳೆಯಾಗುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಇಂದು ಅಪರಾಹ್ನ ವರುಣನಾರ್ಭಟ ಹ್ಯೆರಾಣಗೊಳಿಸಿದ್ದು ಧಾರಾಕಾರ ಮಳೆಯಾಗುತ್ತಿದೆ.
ಇಂದು ಮತ್ತು ನಾಳೆ (ಡಿಸೆಂಬರ್ 2 3) ಕಾಸರಗೋಡು ಜಿಲ್ಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಈ ದಿನಗಳಲ್ಲಿ ಪ್ರವಾಸಿ ಸ್ಥಳಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಕೆ ಇನ್ಭಾಶೇಖರ್ ತಿಳಿಸಿದ್ದಾರೆ. ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಜಾಗರೂಕರಾಗಿರಿ. ಮೀನುಗಾರರು ಮೀನುಗಾರಿಕೆಗೆ ತೆರಳುವಂತಿಲ್ಲ. ಜಿಲ್ಲೆಯ ಕ್ವಾರಿಗಳಲ್ಲಿನ ಗಣಿಗಾರಿಕೆಯನ್ನೂ ಎರಡು ದಿನ ನಿಲ್ಲಿಸಲು ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ನಿರ್ಮಾಣ ಅಥವಾ ನಿರ್ವಹಣೆ ಕೆಲಸ ನಡೆಯುತ್ತಿರುವ ಇತರ ರಸ್ತೆಗಳಲ್ಲಿ ಪ್ರಯಾಣಿಕರಿಗೆ ಸುರಕ್ಷತಾ ಫಲಕಗಳು ಗೋಚರಿಸುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ.
ರಸ್ತೆಗಳಲ್ಲಿ ಗುಂಡಿಗಳು ಅಥವಾ ಇತರ ಸಂಭಾವ್ಯ ಅಪಾಯಗಳಿರುವ ಸ್ಥಳಗಳಲ್ಲಿ, ಅಪಘಾತಗಳ ಅಪಾಯವನ್ನು ತಕ್ಷಣವೇ ನಿವಾರಿಸಲು ಅಗತ್ಯಕ್ರಮ ಮಾಡಲಾಗುತ್ತದೆ.