ಬದಿಯಡ್ಕ : ಪ್ರಗತಿಪರ, ಪ್ರಯೋಗಶೀಲ ಕೃಷಿಕ ಐತ್ತ ಮಾನ್ಯ ಅವರು ಕರ್ಷಕ ರತ್ನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಡಿ.15ರಂದು ನವದೆಹಲಿಯಲ್ಲಿ ನಡೆಯುವ ಬಹುಜನ ಸಾಹಿತ್ಯ ಅಕಾಡೆಮಿಯ 17ನೇ ರಾಷ್ಟ್ರೀಯ ಸಮಾವೇಶದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಬಿ .ಎಸ್. ಎ ಯ ರಾಷ್ಟ್ರೀಯ ಅಧ್ಯಕ್ಷ ನಲ್ಲಾ ರಾಧಾಕೃಷ್ಣನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಐತ್ತ ಮಾನ್ಯ ಅವರು ಕೆನರಾ ಬ್ಯಾಂಕಿನಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿರಿಯ ಮಹಾ ಪ್ರಬಂಧಕರಾಗಿ ಹುದ್ದೆಯಿಂದ ನಿವೃತ್ತರಾದವರು. ಕೃಷಿ ಕಾರ್ಮಿಕ ಕುಟುಂಬದಿಂದ ಬಂದ ಅವರ ಸಾಧನೆಗೆ ಕೇರಳ ರಾಜ್ಯ ಪ್ರಶಸ್ತಿ, ಸ್ಥಳೀಯಾಡಳಿತ ಸಂಸ್ಥೆಗಳಿಂದ ಆದರ್ಶ ಕೃಷಿಕ ಪ್ರಶಸ್ತಿ ಲಭಿಸಿದೆ. ಮಾನ್ಯದಲ್ಲಿ ಬಂಜರು ಭೂಮಿಯನ್ನು ಕೃಷಿ ಯೋಗ್ಯವಾಗಿಸಿ ತೆಂಗು, ಕಂಗು, ಬತ್ತ ಕೃಷಿ, ಹೈನುಗಾರಿಕೆಯನ್ನು ಲಾಭದಾಯಕವಾಗಿಸಿದ್ದಾರೆ. ಅವರ ಕೃಷಿ ಕಾಯಕಕ್ಕೆ ಧರ್ಮಪತ್ನಿ , ಜನಮೆಚ್ಚಿದ ಶಿಕ್ಷಕಿ ಲಲಿತಾ ಉಳಿಯ ಬೆಂಬಲ ನೀಡುತ್ತಿದ್ದಾರೆ.